

ವಿರಾಜಪೇಟೆ: ಸಮೀಪದ ಅಮ್ಮತ್ತಿಯ ಶ್ರೀ ಚಾಮುಂಡೇಶ್ವರಿ ಪಾಷಣಮೂರ್ತಿ ದೇವಾಲಯದ 25ನೇ ವಾರ್ಷಿಕೋತ್ಸವ ಹಾಗೂ ನೇಮೋತ್ಸವ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಇತ್ತೀಚೆಗೆ ಸಂಭ್ರಮದಿಂದ ಆಚರಿಸಲಾಯಿತು.
ದೇವಾಲಯದಲ್ಲಿ ದೇವರಿಗೆ ವಾದ್ಯದೊಂದಿಗೆ ಅಭಿಷೇಕ ಪೂಜೆ ಹಾಗೂ ಅಲಂಕಾರ ಪೂಜೆ, ನಾಗಪೂಜೆ, ನಾಗಹೋಮ, ಆಶ್ಲೇಷ ಬಲಿ, ದುರ್ಗಾಪೂಜೆ, ದುರ್ಗಾ ಹೋಮ ನಡೆಯಿತು.
ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದಾದ ನಂತರ ಪಂಜುರ್ಲಿ, ಪಾಷಾಣಮೂರ್ತಿ ಹಾಗೂ ಗುಳಿಗ ದೇವರುಗಳ ತೆರೆಮಹೋತ್ಸವ ಬೆಳಗಿನ ಜಾವದವರೆಗೆ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ರಾತ್ರಿ ಹಾಗೂ ಹಗಲು ದೇವಾಲಯದ ಆಡಳಿತ ಮಂಡಳಿ ವತಿಯಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ವಾರ್ಷಿಕೋತ್ಸವ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬಾನಂಗಳದಲ್ಲಿ ಆಕರ್ಷಕ ಪಟಾಕಿಗಳ ಶಬ್ದ ಉತ್ಸವಕ್ಕೆ ಮೆರುಗು ತಂದಿತು. ಜಿಲ್ಲೆಯ ವಿವಿಧೆಡೆಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರೆ ಮಹೋತ್ಸವಕ್ಕೆ ಆಗಮಿಸಿದ್ದರು.
ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿಯ ಪ್ರಮುಖರಾದ ಕುಟ್ಟಂಡ ಸರಸ್ವತಿ ಹಾಗೂ ಲೋಕೇಶ್ ಮುತ್ತಪ್ಪ, ಖಜಾಂಚಿ ಉದ್ದಪಂಡ ಖುಷಿ ಅಯ್ಯಪ್ಪ ಇತರರು ಇದ್ದರು.