ಗೋಳಿಯಂಗಡಿ ಶಾಲೆಯಲ್ಲಿಂದು ವಾರ್ಷಿಕೋತ್ಸವ

varshiko
Published on

ಗೋಳಿಯಂಗಡಿ: ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ ಮೊದಲ ಬಾರಿ ವಾರ್ಷಿಕೋತ್ಸವ ದಿಬ್ಬಣ ಆಯೋಜಿಸಲಾಗಿದ್ದು, ಜ.4ರಂದು ನಡೆಯಲಿದೆ. ಬೆಳಗ್ಗೆ 9ಕ್ಕೆ ಬೆಳ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ಧ್ವಜಾರೋಹಣಗೈಯಲಿದ್ದು, ಸಂಜೆ 7.30ಕ್ಕೆ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಅಧ್ಯಕ್ಷತೆಯಲ್ಲಿ ವಾರ್ಷಿಕೋತ್ಸವ ನಡೆಯಲಿದೆ.

ಬಹುಮಾನ ವಿತರಣೆ, ಶಿಕ್ಷಕರಿಗೆ ಸನ್ಮಾನ ನೆರವೇರಲಿದ್ದು, ಅಂಗನವಾಡಿ ಮಕ್ಕಳಿಂದ ಚಿಣ್ಣರ ಚಿಲಿಪಿಲಿ ನಡೆಯಲಿದೆ. 8.30ರಿಂದ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳ ಕೂಡುವಿಕೆಯಲ್ಲಿ ನೃತ್ಯ ಸಿಂಚನ, ಪ್ರಹಸನ ಸಹಿತ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ವಿದ್ಯಾರ್ಥಿಗಳಿಂದಲೇ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಶಾಲೆಯ ಇತಿಹಾಸ: 1963ರಲ್ಲಿ ಈ ಶಾಲೆ ಆರಂಭಗೊಂಡಿದ್ದು, ಸುಮಾರು 60 ವರ್ಷಗಳ ಇತಿಹಾಸ ಹೊಂದಿದೆ. ಹುಣ್ಸೆಮಕ್ಕಿ ಶಿಕ್ಷಕ ಸುಬ್ಬಣ್ಣ ಶೆಟ್ಟಿ ಈ ಶಾಲೆಯ ಪ್ರಥಮ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಶಾಲೆ ಆರಂಭವಾದ 4 ವರ್ಷಗಳ ಬಳಿಕ ಗೋಳಿಜೆಡ್ಡು ಎನ್ನುವಲ್ಲಿ ಎರಡು ಕೊಠಡಿಗಳೊಳಗೊಂಡ ಕಟ್ಟಡದಲ್ಲಿ ಶಾಲೆ ಕಾರ್ಯನಿರ್ವಹಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net