ಅನ್ನದಾತರ ಬದುಕಿಗೆ ಪ್ರೇರಣೆ ಸವದಿ

17telsang1
?????????????
Published on

ತೆಲಸಂಗ: ಬದಲಾಗುತ್ತಿರುವ ಕಾಲಘಟ್ಟದಲ್ಲಿ ಕೃಷಿಯಲ್ಲಿ ಎದುರಾಗುತ್ತಿರುವ ಸವಾಲುಗಳ ಪರಿಹಾರಕ್ಕೆ ಅವಶ್ಯವಿರುವ ಅಭಿವೃದ್ಧಿ ಜತೆಗೆ ಅನ್ನದಾತರ ಬದುಕಿಗೆ ಪ್ರೇರಣೆಯಾಗಿದ್ದು ಶಾಸಕ ಲಕ್ಷ್ಮಣ ಸವದಿ ಎಂದು ಹಿರಿಯ ರೈತ ನಾನಾಗೌಡ ಪಾಟೀಲ ಹೇಳಿದರು.

ಗ್ರಾಮದಲ್ಲಿ ಲಕ್ಷ್ಮಣ ಸವದಿ ಜನ್ಮದಿನದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಸಾಧಕ ರೈತರಿಗೆ ಸನ್ಮಾನ ಹಾಗೂ ಶ್ರೀಕೃಷ್ಣ ಪಾರಿಜಾತ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ವ್ಯವಸಾಯದ ಮೇಲಿನ ನಿರಾಸಕ್ತಿಯಿಂದ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ. ಕೃಷಿ ಹಾಗೂ ವ್ಯವಸಾಯದಲ್ಲಿ ವಿಶ್ವಾಸ ಮೂಡಿಸುವ ಕೆಲಸ ಸವದಿ ಮಾಡಿದ್ದಾರೆ ಎಂದರು.

ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮಸಿದ್ಧ ಖೊಬ್ರಿ ಮಾತನಾಡಿ, ಲಕ್ಷ್ಮಣ ಸವದಿ ಪ್ರಯತ್ನದಿಂದ ಅಥಣಿ ತಾಲೂಕು ಶೀಘ್ರದಲ್ಲೆ ಸಂಪೂರ್ಣ ನೀರಾವರಿ ಹೊಂದಲಿದೆ. 20 ವರ್ಷಗಳ ಹಿಂದೆ ಜಮೀನುಗಳಿದ್ದರೂ ಬೆಳೆ ಬರುತ್ತಿರಲಿಲ್ಲ. ಕೃಷಿ ಚಟುವಟಿಕೆಗಳಿಲ್ಲದೆ ಒಣ ಬೇಸಾಯದಲ್ಲಿಯೇ ರೈತರು ಬೆಳೆ ಲಾಭ ಗಳಿಸಲು ಪರದಾಡಬೇಕಿತ್ತು. ಆದರೆ ಇಂದು ನೀರಾವರಿ, ವಿದ್ಯುತ್, ರಸ್ತೆ, ಶಿಕ್ಷಣ, ಉದ್ಯೋಗ ಒದಗಿಸಿ ರೈತ ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಕೃಷಿ ಯಾವುದಕ್ಕೂ ಕಡಿಮೆ ಇಲ್ಲವೆಂದು ಸವದಿ ಸಾಬೀತುಪಡಿಸಿದ್ದಾರೆ ಎಂದರು

ಹಿರಿಯ ರೈತ ಗುರು ಕಾಮನ, ಕಾಶಿಲಿಂಗ ಲೋಕಂಡೆ, ಸಂತೋಷ, ಸಿದ್ದಗೌಡ ಕುಮಠಳ್ಳಿ, ಶೇಖರ ವಳಸಂಗ, ಯಂಕಣ್ಣ ಅಸ್ಕಿ, ರಾಜು ಖ್ಯಾಡಿ, ಸಿದ್ದಲಿಂಗ ಮಾದರ, ಶ್ರೀಶೈಲ ಶೆಲ್ಲೆಪ್ಪಗೋಳ, ರಾಜು ಪರ್ನಾಕರ, ಡಾ.ಬಿ.ಎಸ್.ಕಾಮನ, ಶ್ರವಣ ಪರ್ನಾಕರ, ದರೇಪ್ಪ ಮಾಳಿ, ಸುನೀಲ ಮಾದರ, ರಮೇಶ ಗಣಿ, ರಾಘು ಉಂಡೋಡಿ, ಮೋಹಿನ್ ನಧಾಫ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net