ಆಂಜನೇಯಸ್ವಾಮಿ ತೇರು

30arsph2ep
ಅರಸೀಕೆರೆ ತಾಲೂಕಿನ ಬಾಣಾವರ ಗ್ರಾಮದ ಕೋಟೆ ಶ್ರೀ ಆಂಜನೇಯಸ್ವಾಮಿ ರಥೋತ್ಸವದ ನೋಟ.
Published on

ಅರಸೀಕೆರೆ: ತಾಲೂಕಿನ ಬಾಣಾವರ ಗ್ರಾಮದಲ್ಲಿರುವ ಶ್ರೀ ಕೋಟೆ ಆಂಜನೇಯಸ್ವಾಮಿ ದೇವರ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.

ಗ್ರಾಮ ದೇವತೆಗಳಾದ ಕರಾಳಮ್ಮ, ಪ್ಲೇಗಿನಮ್ಮ, ಕಾಳಮ್ಮ, ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸರ್ವಾಲಂಕೃತ ರಥದಲ್ಲಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದ್ದಂತೆ ನೆರೆದಿದ್ದ ಜನಸ್ತೋಮ ಜಯಘೋಷ ಮೊಳಗಿಸಿ ಬಾಳೆಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು. ದೊಡ್ಡೇನಹಳ್ಳಿ, ಎ.ಮಲ್ಲಾಪುರ, ಚಿಕ್ಕಾರೆಹಳ್ಳಿ, ಸಾಲಾಪುರ, ಮನಕತ್ತೂರು, ಉಪ್ಪನಹಳ್ಳಿ, ಸರ್ವೆಕೊಪ್ಪಲು, ತೊಂಡಿಗನಹಳ್ಳಿ, ಶಾನೆಗೆರೆ ಸೇರಿ ಹತ್ತಾರು ಹಳ್ಳಿಗಳ ಜನರು ಇದ್ದರು. ದೇವಾಲಯ ಸಮಿತಿ ವತಿಯಿಂದ ಭಕ್ತರಿಗೆ ಪಾನಕ, ಫಲಾಹಾರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net