ಆಂಜನೇಯ ಜಾತ್ರಾ ಮಹೋತ್ಸವ ಸಂಪನ್ನ

jatre festival
ಶ್ರಾವಣ ಮಾಸದ ನಿಮಿತ್ತ ಸಿದ್ದಾಪುರದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಶ್ರೀ ಆಂಜನೇಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರೆವಣೆಗೆ ಮೂಲಕ ದೇವಾಸ್ಥಾನಕ್ಕೆ ತರಲಾಯಿತು.
Published on

ಸಿದ್ದಾಪುರ: ಸಮೀಪದ ಕೃಷ್ಣಾಪುರ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಶ್ರಾವಣ ಮಾಸದ ನಾಲ್ಕನೇ ಶನಿವಾರ ಸಂಪನ್ನವಾಗಿ ನರೆವೇರಿತು.

ಗಂಗೆ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಆಂಜನೇಯನಿಗೆ ಮಂದಿರದಲ್ಲಿ ಬೆಳಗ್ಗೆ ವಿವಿಧ ಧರ್ಮಿಕ ಕೈಂಕರ‌್ಯಗಳು ಜರುಗಿದವು. ಅಲ್ಲದೇ, ವಿವಿಧ ಧಾನ್ಯಗಳ ನೇವೈದ್ಯ ಸಮರ್ಪಿಸಲಾಯಿತು.

ನಂತರ ಮಂಗಳ ವಾದ್ಯಗಳೊಂದಿಗೆ ದೇವರ ಮೂರ್ತಿಯನ್ನು ಪಲ್ಲಕ್ಕಿಯೊಂದಿಗೆ ದೇವಸ್ಥಾನಕ್ಕೆ ತರಲಾಯಿತು. ಮಹಿಳೆಯರು ಕಳಸರೋಹಣದೊಂದಿಗೆ ಮೆರವಣಿಗೆ ಮೆರಗನ್ನು ಹೆಚ್ಚಿಸಿದರು.

ನೂರಾರು ಭಕ್ತರು ದೇವರಿಗೆ ಕಾಯಿ, ಹಣ್ಣು ಸಮರ್ಪಿಸಿ ಭಕ್ತಿ ಮೆರದರು. ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು. ದೇವಸ್ಥಾನದ ಸಮಿತಿ ಸದಸ್ಯರು ಹಾಗೂ ಗ್ರಾಮದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net