ಪ್ರಾಣಿವಧೆ ಮಾಡದಂತೆ ರ್ನಿಣಯ

24katkol3
Published on

ಕಟಕೋಳ: ಗ್ರಾಮದಲ್ಲಿ ಮೇ 27ರಿಂದ ಗ್ರಾಮ ದೇವಿಯರ ಜಾತ್ರೆ ಆರಂಭಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಾಣಿವಧೆ ಮಾಡದಂತೆ ರ್ನಿಣಯ ಕೈಗೊಳ್ಳಲಾಗಿದೆ ಎಂದು ಗ್ರಾಮದ ಮುಖಂಡರು ತಿಳಿಸಿದರು.

ಗ್ರಾಮದೇವಿಯರ ಜಾತ್ರೆ ಅಂಗವಾಗಿ ಗ್ರಾಮದಲ್ಲಿ ಸಭೆ ನಡೆಸಿ ಮಾತನಾಡಿ, ಪ್ರಾಣಿ ಹತ್ಯೆ ಮಾಡಬಾರದು ಎಂಬ ಕಾರಣಕ್ಕೆ ಗ್ರಾಮದಲ್ಲಿ ಇದ್ದ 40 ಕೋಣಗಳನ್ನು ಮಾರಿ 5 ಲಕ್ಷ ರೂ. ಸಂಗ್ರಹಿಸಲಾಗಿದೆ. ಇದೇ ಹಣವನ್ನು ಜಾತ್ರೆ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಒಂದು ವೇಳೆ ಯಾರಾದರೂ ಪ್ರಾಣವಧೆ ಮಾಡಲು ಮುಂದಾದರೆ ನಾವೇ ಅದನ್ನು ತಡೆಯುತ್ತೇವೆ. ಒಟ್ಟಿನಲ್ಲಿ ಜಾತ್ರೆ ಸುಸೂತ್ರವಾಗಿ ನಡೆಲು ಬೇಕಾದ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಮುಖಂಡರಾದ ಮಲ್ಲನಗೌಡ ಸುರಗ, ಬಾಪುಸಾಹೇಬ ದೇಸಾಯಿ, ಚಿನ್ನಪ್ಪ ಪಟ್ಟಣಶೆಟ್ಟಿ, ಚಂಬಣ್ಣ ತಲ್ಲೂರ, ಈರಪ್ಪ ಸುಂಕದ, ಸಿದ್ದಪ್ಪ ಉಜನಕೊಪ್ಪ, ಮಲ್ಲಪ್ಪ ಪಟ್ಟಣಶೆಟ್ಟಿ, ಶಿವಪ್ಪ ಕುರಬೇಟ, ಮಲ್ಲಿಕಾರ್ಜುನ ಕುರಬೇಟ, ಗುರಪ್ಪ ಸಿದ್ದನಗೌಡ, ಕಿರಣ ದೇಸಾಯಿ ಸೇರಿದಂತೆ ಇತರರಿದ್ದರು.

>ಕಟಕೋಳ ಗ್ರಾಮದಲ್ಲಿ 27ರಿಂದ ಆರಂಭಗೊಳ್ಳುವ ಗ್ರಾಮದೇವಿಯರ ಜಾತ್ರೆಗೆ ಸಕಲು ಸಹಕಾರ ನೀಡಬೇಕು. ಜಾತ್ರೆಗೆ ಬೇಕಾದ ಎಲ್ಲ ಭದ್ರತೆ ಒದಗಿಸಲು ನಮ್ಮ ಇಲಾಖೆ ಸಜ್ಜಾಗಿದೆ. ಸೌಹಾರ್ದತೆಯಿಂದ ಜಾತ್ರೆ ಆಚರಿಸೋಣ.

> ಬಸವರಾಜ ಕೊಣ್ಣೂರೆ, ಪಿಎಸ್​ಐ ಕಟಕೋಳ ಪೊಲೀಸ್​ ಠಾಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net