ಹೈನೋದ್ಯಮದಿಂದ ಬದುಕು ವೈನು

14-bidadi-2
Published on

*ಎಲ್ಲರಿಗೂ ಮಾದರಿಯಾದ ರಾಮನಹಳ್ಳಿಯ ರೈತ ಸುರೇಶ್​

* ನಿತ್ಯ 125 ಲೀಟರ್​ ಹಾಲು ಉತ್ಪಾದನೆ

*ವಾರ್ಷಿಕ 12 ಲಕ್ಷ ರೂ. ಆದಾಯ

ಚೇತನ್​ ಚಕ್ಕೆರೆ ಬಿಡದಿ

ರೈತನಿಗೆ ಕೃಷಿಯೊಂದಿಗೆ ಹೈನೋದ್ಯಮವೂ ವರದಾನವಾಗಿದ್ದು, ಹೈನುಗಾರಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಮಾಡಿದರೆ ಕೈತುಂಬ ಹಣ ಗಳಿಸಬಹುದು. ಇದಕ್ಕೆ ನಿದರ್ಶನವಾಗಿದ್ದಾರೆ ರಾಮನಹಳ್ಳಿಯ ರೈತ ಸುರೇಶ್​.

ಹೌದು. ರಾಮನಹಳ್ಳಿಯ ರೈತ ಸುರೇಶ್​ ಅವರು ಹೈನುಗಾರಿಕೆಯಿಂದಲೇ ಬದುಕನ್ನು ಬಂಗಾರವಾಗಿಸಿಕೊಂಡಿದ್ದಾರೆ. ವೈಜ್ಣಾನಿಕವಾಗಿ ಹೈನುಗಾರಿಕೆ ಮಾಡಿ ಲಾಭ ಕಂಡುಕೊಂಡು, ಪ್ರತಿ ದಿನ ನೂರಾರು ಲೀಟರ್​ ಹಾಲು ಉತ್ಪಾದಿಸುತ್ತಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ರೈತರು ದೀರ್ ಆದಾಯದ ಮೇಲೆ ಅವಲಂಬಿಸಿರುತ್ತಾರೆ. ಅಂತಹ ಹೈನುಗಾರಿಕೆಯನ್ನು ಸರಿಯಾದ ಉಪಕ್ರಮದ ಮೂಲಕ ಕೈಗೊಂಡರೆ ಪೂರ್ಣ ಪ್ರಮಾಣದ ಉದ್ಯೋಗವಾಗಿಸಿಕೊಂಡು ಸಾಕಷ್ಟು ಆದಾಯ ಪಡೆಯಬಹುದು ಎಂಬುದನ್ನು ಸುರೇಶ್​ ಸಾಧಿಸಿ ತೋರಿಸಿದ್ದಾರೆ.

10ಕ್ಕೂ ಹೆಚ್ಚು ತಳಿಗಳ ಹಸು:

ಸುರೇಶ್​ 8 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಇದರ ಜತೆಗೆ ಹೈನುಗಾರಿಕೆಯನ್ನೂ ದೊಡ್ಡ ಮಟ್ಟದಲ್ಲಿ ಕೈಗೊಂಡಿರುವ ಅವರು, 10ಕ್ಕೂ ಹೆಚ್ಚು ವಿವಿಧ ತಳಿಗಳ ಹಸುಗಳನ್ನು ಸಾಕಿದ್ದು, ಪ್ರತಿ ದಿನಕ್ಕೆ ಎರಡು ಪಾಳಿಯಂತೆ 125 ಲೀಟರ್​ ಹಾಲು ಹಾಕುತ್ತಿದ್ದು, ವಾರ್ಷಿಕ 10-12 ಲಕ್ಷ ರೂ. ಆದಾಯ ಕಾಣುತ್ತಿದ್ದಾರೆ.

ವಿಶೇಷ ಎಂದರೆ, ಹೈನುಗಾರಿಕೆಯನ್ನು ವೈಜ್ಱಆಬು ನಿಕವಾಗಿ ಮಾಡುತ್ತಿದ್ದಾರೆ. ದೊಡ್ಡ ಶೆಡ್​ ನಿರ್ಮಾಣ ಮಾಡಿಕೊಂಡಿದ್ದು, ಹಸುಗಳಿಗೆ ನೆರವಾಗುವ ನಿಟ್ಟಿನಲ್ಲಿ ಮ್ಯಾಟ್​ ಹಾಕಿದ್ದಾರೆ. ಬೆಳಗ್ಗೆ, ಸಂಜೆ ಹಾಲು ಕರೆಯಲು ಮಿಷನ್​ ಬಳಸುತ್ತಿದ್ದಾರೆ. ಇದರಿಂದಾಗಿ ಕಾರ್ಮಿಕರ ಅವಲಂಬನೆ ಕಡಿಮೆ ಇದೆ.

ಕರು ಸಾಕಣೆಕೆಗೆ ಒತ್ತು:

ಹಸುಗಳ ಸಾಕಣೆ ಜತೆಗೆ ಉತ್ತಮ ತಳಿಗಳ ಕರುಗಳನ್ನೂ ಸಾಕಣೆ ಮಾಡುತ್ತಿದ್ದಾರೆ. ಬೇರೆ ಕಡೆಗಳಿಂದ ಉತ್ತಮ ತಳಿಗಳ ಕರುಗಳನ್ನು ತಂದು ಸಾಕುವ ಸುರೇಶ್​, ಉತ್ತಮ ಬೆಲೆಗೆ ಮಾರಾಟ ಮಾಡಿ, ಅದರಿಂದಲೂ ಲಾಭ ಕಾಣುತ್ತ್ತಿದ್ದಾರೆ. ಅಂತೆಯೇ, ಹಸು ಸಾಕಣೆಗೆ ಮೇವು ಅತಿ ಮುಖ್ಯ. ಹಾಗಾಗಿ ಸುರೇಶ್​, ಬೇಬಿ ಕಾರ್ನ್​ ಜೋಳವನ್ನು ಬೆಳೆಯುತ್ತಿದ್ದಾರೆ.

ಎಲ್ಲವೂ ಒಂದೇ ಕಡೆ

ಹೈನುಗಾರಿಕೆ ಜತೆಗೆ ಮೇಕೆ ಸಾಕಣೆ ಮಾಡುವುದನ್ನು ಸುರೇಶ್​ ಕರಗತ ಮಾಡಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಮಾಂಸಕ್ಕೆ ಉತ್ತಮ ಬೇಡಿಕೆ ಇದೆ. ಇದನ್ನರಿತಿರುವ ರೈತ, 50ಕ್ಕೂ ಹೆಚ್ಚು ಮೇಕೆ ಸಾಕಣೆ ಮಾಡಿದ್ದು, ಮೇಕೆಗಳಿಗೂ ಬೇಬಿ ಕಾರ್ನ್​ ಜೋಳವನ್ನು ಬಳಸುತ್ತಿದ್ದಾರೆ. ಚಾಪರ್​ ಕಟರ್​ ಮೂಲಕ ಕಟ್​ ಮಾಡಿ ಮೇಕೆಗಳಿಗೆ ಹಾಕುತ್ತಾರೆ. ದಿನದ ಮೂರು ತಾಸು ಇವುಗಳನ್ನು ಜಮೀನಿಗೆ ಬಿಟ್ಟು ಮೇಯಿಸಿ ತದನಂತರ ಶೆಡ್​ನಲ್ಲಿ ಕೂಡಿ ಹಾಕುತ್ತಾರೆ. ಜತೆಜತೆಗೆ ಜಮೀನಿನಲ್ಲಿ ಭತ್ತ, ರಾಗಿಯನ್ನೂ ಬೆಳೆಯುತ್ತಿದ್ದಾರೆ. ಜಮೀನಿನ ಅಕ್ಕ ಪಕ್ಕದವರ ಜಮೀನುಗಳನ್ನೂ ಗುತ್ತಿಗೆಗೆ ಪಡೆದು ಆ ಜಮೀನಿನಲ್ಲಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇತ್ತೀಚೆಗೆ ರಾಗಿ ಬೆಳೆ ಬೆಳೆದು ಕಟಾವು ಮಾಡಿದ್ದಾರೆ. ಈಗ ಸುಮಾರು ಎರಡು ಎಕರೆಯಲ್ಲಿ ಭತ್ತ ನಾಟಿ ಮಾಡಿದ್ದಾರೆ.

ಹೈನುಗಾರಿಕೆಯನ್ನು ಸರಿಯಾದ ಯೋಜನೆಯೊಂದಿಗೆ ಆರಂಭಿಸಿದರೆ ಇದರಷ್ಟು ಆದಾಯಕರ ಉದ್ಯೋಗ ಮತ್ತೊಂದಿಲ್ಲ. ಪ್ರತಿಯೊಬ್ಬರೂ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸುವುದರಿಂದ ಇದು ನಿತ್ಯದ ಬೇಡಿಕೆಯಾಗಿದೆ. ವೈಾನಿಕವಾಗಿ ಹೈನುಗಾರಿಕೆ ಮಾಡುವುದರಿಂದ ಲಾಭ ಕಾಣಬಹುದಾಗಿದೆ. > ಸುರೇಶ್​, ರೈತ, ರಾಮನಹಳ್ಳಿಮೊಬೈಲ್​ ಸಂಖ್ಯೆ: 9108662558, ಸಂಪರ್ಕಿಸುವ ಸಮಯ ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net