ಅನಿಕೇತನ ಅಕಾಡೆಮಿ ಸಾಧನೆ

000000000000
Published on

ಕನಕಪುರ: ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕುಂಗ್-ಪು ಚಾಂಪಿಯನ್‌ಶ್ಿನಲ್ಲಿ ಕನಕಪುರ ಅನಿಕೇತನ ಸ್ಫೋರ್ಟ್ಸ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಕ್ರೀಡಾ ಪಟುಗಳು 15 ಪದಕಗಳನ್ನು ಪಡೆದು ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕಳೆದ ಭಾನುವಾರ ಆಯೋಜಿಸಿದ ರಾಜ್ಯಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ನಗರದ ಕ್ರೀಡಾಪಟುಗಳು ರಾಮನಗರ ಜಿಲ್ಲೆಯನ್ನು ಪ್ರತಿನಿಧಿಸಿ 6 ಚಿನ್ನ, 3 ಬೆಳ್ಳಿ ಹಾಗೂ 6 ಕಂಚಿನ ಪದಕಗಳನ್ನು ಪಡೆಸಿದ್ದಾರೆ. ಎಚ್.ಸರೋವರ, ಎಚ್.ಎಸ್.ತ್ರಪುರಾಂತಕ, ರಾಘವರಾಜ್, ಎಚ್.ವಿ.ಕಿರಣ್, ಮಹೇಶ್‌ನಾಯಕ್ ಹಾಗೂ ಕೆ.ಜೆ.ಅರ್ಜುನ್ ಚಿನ್ನದ ಪದಕ, ಲಿಖಿತಾ, ಎಸ್.ನಾಯಕ್, ಹರ್ಷನ್‌ಗೌಡ, ಸಿ.ಮಿಥನ್ ಬೆಳ್ಳಿ ಪದಕ, ಶಶಿಧರನ್, ಸಿ.ಭರಣಿ, ಡಿ.ಯೋಗಿತಾ, ಎಂ.ಅಖಿಲೇಶ್, ಗುರು ಹಾಗೂ ಎಚ್.ಆರ್.ಚಂದನ್ ಕಂಚಿನ ಪದಕ ವಿಜೇತರಾಗಿದ್ದಾರೆ.

ಅಕಾಡೆಮಿಯ ನಿರ್ದೇಶಕಿ ಪುಷ್ಪಾವತಿ ತಂಡದ ವ್ಯವಸ್ಥಾಪಕ, ಸಂತೋಷ್, ತರಬೇತುದಾರ ಸುರೇಶ್ ವಿಜೇತರನ್ನು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net