ಸಿಡಿಪಿಒಗೆ ಅಂಗನವಾಡಿ ನೌಕರರ ಮನವಿ

22RAM1
Published on

ರಾಮದುರ್ಗ: ಎ್​ಆರ್​ಎಸ್​ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಅಂಗನವಾಡಿ ನೌಕರರು ಪಟ್ಟಣದಲ್ಲಿ ಶುಕ್ರವಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.

ಐಸಿಡಿಎಸ್​ ಯೋಜನೆ ಬಲಹೀನ ಗೊಳಿಸಲು ಕೇಂದ್ರ ಸರ್ಕಾರ ಎ್​ಆರ್​ಎಸ್​ ಯೋಜನೆ ಜಾರಿಗೊಳಿಸಿರುವುದನ್ನು ವಾಪಸ್​ ಪಡೆಯಬೇಕು. ಅಂಗನವಾಡಿಗಳಿಗೆ ಅಗತ್ಯ ಅನುದಾನ ಮಂಜೂರು ಮಾಡಬೇಕು. ಅಂಗನವಾಡಿ ನೌಕರರನ್ನು ಕಾಯಂಗೊಳಿಸಬೇಕು. ಸುಪ್ರೀಂಕೋರ್ಟ್​ ಆದೇಶದಂತೆ ಗ್ರಾಚ್ಯೂಟಿ ನೀಡಬೇಕೆಂದು ಅಂಗನವಾಡಿ ನೌಕರರು ಒತ್ತಾಯಿಸಿದರು.

ಎ್​ಆರ್​ಎಸ್​ ಯೋಜನೆಯನ್ನು ಸ್ಥಗಿತಗೊಳಿಸದಿದ್ದರೆ ಸಂಬಂಧಿಸಿದ ಇಲಾಖೆ ಸಚಿವರ ಮನೆ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಕಾರ್ಮಿಕ ಮುಖಂಡ ಗೈಬು ಜೈನೆಖಾನ, ಅಂಗನವಾಡಿ ನೌಕರರ ಸಂದ ಅಧ್ಯೆ ಸರಸ್ವತಿ ಮಾಳಶೆಟ್ಟಿ, ವಿಜಯಲಕ್ಷಿ$್ಮ ಸಿದ್ಧಿಬಾವಿ, ಶಕುಂತಲಾ ನಾರಾಯಣಕರ, ಶಕುಂತಲಾ ಶಿರಸಂಗಿ, ಅನ್ನಪೂರ್ಣಾ ಚಿಕ್ಕಮಠ, ಇಂದ್ರಾ ಸುಟಗಾಲ, ಬೋರಮ್ಮ ತೆಕ್ಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net