ಅಂಗನಿಮಾರು ನೇಮೋತ್ಸವ ಆಮಂತ್ರಣ ಬಿಡುಗಡೆ

Bdk_Anganimaru`
Published on

ಮಂಜೇಶ್ವರ: ಅಂಗನಿಮಾರು ಶ್ರೀ ಕಡಂಗಲ್ಲಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ನೇಮೋತ್ಸವ ಮಾ.21, 22ರಂದು ಜರುಗಲಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ದೈವಸ್ಥಾನದಲ್ಲಿ ಶುಕ್ರವಾರ ಜರುಗಿತು.

ಪವಿತ್ರಪಾಣಿ ಬೀಡು ಕುಶಲ ಕುಮಾರ ಪಾತೂರಾಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಆಡಳಿತ ಸಮಿತಿ ಟ್ರಸ್ಟಿನ ಅಧ್ಯಕ್ಷ ಕರುಣಾಕರ ಶೆಟ್ಟಿ ಕೊಡ್ಲಮೊಗರು ಅಧ್ಯಕ್ಷತೆ ವಹಿಸಿದ್ದರು.

ದೈವನರ್ತಕ ಗಣೇಶ್​ ಬಾಯಾರ್​, ದಾನಿಗಳಾದ ಸದಾಶಿವ ಮಡ್ವ ಉಪಸ್ಥಿತರಿದ್ದರು. ಹಿರಿಯರಾದ ಕೇಶವ ಮಾಸ್ತರ್​ ನೂಜಿ, ಮಹಿಳಾ ಸೇವಾ ಸಮಿತಿ ಗೌರವಾಧ್ಯೆ ಲೀಲಾ ರಾಮ ಮೂಲ್ಯ, ಟ್ರಸ್ಟಿನ ಉಪಾಧ್ಯಕ್ಷ ಈಶ್ವರ, ಪ್ರಧಾನ ಕಾರ್ಯದರ್ಶಿ ಹೂವಯ್ಯ ಹಾಗೂ ಕೋಶಾಧಿಕಾರಿ ನಾರಾಯಣ ಸಾಲಿಯಾನ್​, ಭಕ್ತರು ಉಪಸ್ಥಿತರಿದ್ದರು. ಸೇವಾಸಮಿತಿ ಅಧ್ಯಕ್ಷ ಸುಧೀರ್​ ರಂಜನ್​ ದೈಗೋಳಿ ಸ್ವಾಗತಿಸಿದರು. ಸೇವಾ ಸಮಿತಿ ಕಾರ್ಯದರ್ಶಿ ಚಂದ್ರಹಾಸ ಕಾನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net