ಕಲಬುರಗಿ :ಆಶಾ ಕಾರ್ಯಕರ್ತೆಯರ ರಾಜ್ಯ ಸಮ್ಮೇಳನ

03122019 Koppal Anganawadi Workers protest
Published on

ಡಿ.ನಾಗಲಕ್ಷಿö್ಮÃ ಮಾಹಿತಿ | ಸೆ.೧೩, ೧೪ರಂದು ಬೃಹತ್ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಶಾಸನಬದ್ಧ ಸೌಲಭ್ಯ ಒದಗಿಸಬೇಕು ಇತರ ಬೇಡಿಕೆಗಳೊಂದಿಗೆ ನಗರದ ವೀರಶೈವ ಕಲ್ಯಾಣ ಮಂಟಪ ಎದುರು ಸೆ.೧೩, ೧೪ರಂದು ಪ್ರಥಮ ರಾಜ್ಯಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷಿ ತಿಳಿಸಿದರು.
ಸತತ ಹೋರಾಟದಿಂದಾಗಿ ಸುಮಾರು ೪೨ ಸಾವಿರ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ೫೦೦೦ ರೂ. ಗೌರವಧನ ನೀಡುತ್ತಿದ್ದು, ಕೇಂದ್ರವೂ ಆರ್‌ಸಿಎಚ್ ಪೋರ್ಟಲ್ ಪ್ರಕಾರ ನೀಡುತ್ತಿರುವ ಸುಮಾರು ೭೦೦೦ ರೂ.ಗಳಲ್ಲಿ ೩೦೦೦ ರೂ. ಸಹ ಕೈ ಸೇರುತ್ತಿಲ್ಲ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಶಿಶು-ತಾಯಿ ಮರಣ, ಮನೆಯಲ್ಲಿ ಹೆರಿಗೆ ನಿಯಂತ್ರಣ ಸೇರಿ ಹತ್ತಾರು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದು, ಆರ್‌ಸಿಎಚ್ ಪೋರ್ಟಲ್‌ಗೆ ಲಿಂಕ್, ಆಶಾ ಸಾಫ್ಟ್ವೇರ್‌ಗಳಲ್ಲಿ ಗೊಂದಲಗಳಿದ್ದರಿAದ ಸ್ಥಗಿತಗೊಳಿಸಬೇಕು. ಸರ್ಕಾರಿ ನೌಕರರೆಂದು ಪರಿಗಣಿಸಿ ತಿಂಗಳಿಗೆ ೧೫ ಸಾವಿರ ರೂ. ವೇತನ ಆಶಾಗಳ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ಭದ್ರತೆ ಒದಗಿಸಿ ಅಗತ್ಯ ಬಜೆಟ್ ನೀಡಬೇಕು. ಆಶಾಗಳಲ್ಲದ ಕೆಲಸ ನಿಲ್ಲಿಸಬೇಕು. ಸೇವಾ ನಿವೃತ್ತರಿಗೆ ಮೂರು ಲಕ್ಷ ರೂ., ಆರೋಗ್ಯ ಸಮಸ್ಯೆ ಎದುರಾದರೆ ಮೂರು ತಿಂಗಳ ನಿಶ್ಚಿತ ಗೌರವಧನ ನೀಡಬೇಕು. ಸಂಪೂರ್ಣ ಆರೋಗ್ಯ ತಪಾಸಣೆ ಪ್ರತಿವರ್ಷ ಮಾಡಬೇಕು ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಪ್ರಮುಖರಾದ ವಿ.ಜಿ. ದೇಸಾಯಿ, ರಾಘವೇಂದ್ರ, ಎಸ್.ಎಂ. ಶರ್ಮಾ, ಶಿವಲಿಂಗಮ್ಮ, ಶಾರದಾ ನಗನೂರ, ರೂಪ ಮುತ್ತಗಡ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net