ಆಂದೋಲಾದಲ್ಲಿ ಶ್ರೀರಾಮ, ಯೋಗಿ, ಮುತಾಲಿಕ್, ಕರುಣೇಶ್ವರರ ಭಾವಚಿತ್ರಕ್ಕೆ ಸೆಗಣಿ ಎರಚಿದ ಕಿಡಿಗೇಡಿಗಳು

ಕಲಬುರಗಿ: ಜೇವರ್ಗಿ ತಾಲೂಕಿನ ಆಂದೋಲಾ ಗ್ರಾಮದಲ್ಲಿ ಶ್ರೀರಾಮ ಸೇನೆಯ ನಾಮಫಲಕದಲ್ಲಿದ್ದ ಶ್ರೀರಾಮನ ಭಾವಚಿತ್ರಕ್ಕೆ ಕಿಡಿಗೇಡಿಗಳು ಸೆಗಣಿ ಹಚ್ಚಿ ವಿಕೃತಿ ಮೆರೆದಿದ್ದಾರೆ.
IMG-20231101-WA0021
Published on

ಕಲಬುರಗಿ: ಜೇವರ್ಗಿ ತಾಲೂಕಿನ ಆಂದೋಲಾ ಗ್ರಾಮದಲ್ಲಿ ಶ್ರೀರಾಮ ಸೇನೆಯ ನಾಮಫಲಕದಲ್ಲಿದ್ದ ಶ್ರೀರಾಮನ ಭಾವಚಿತ್ರಕ್ಕೆ ಕಿಡಿಗೇಡಿಗಳು ಸೆಗಣಿ ಹಚ್ಚಿ ವಿಕೃತಿ ಮೆರೆದಿದ್ದಾರೆ.

ಶ್ರೀರಾಮನ ಭಾವಚಿತ್ರದ ಜತೆಗೆ ನಾಮಫಲಕದಲ್ಲಿದ್ದ ಹನುಮಂತ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಸೇನೆಯ ಗೌರವಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಸೆಗಣಿ ಎರಚಿದ್ದಾರೆ.

ಆಂದೋಲಾ ಗ್ರಾಮದಲ್ಲಿರುವ ಶ್ರೀ ಕರುಣೇಶ್ವರ ಹಿರೇಮಠದ ಮಾರ್ಗತೋರುವ ನಾಮಫಲಕಕ್ಕೂ ಅಪಮಾನ ಮಾಡಿದ್ದು, ಕರುಣೇಶ್ವರರ ಭಾವಚಿತ್ರ ಮತ್ತು ಸೇನೆ ಪದಾಧಿಕಾರಿಗಳ ಭಾವಚಿತ್ರಕ್ಕೂ ಸೆಗಣಿ ಎರಚಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net