ಹಿರಿಯ ನಟ ಅನಂತ್ ​​ನಾಗ್​ ಸೇರಿ ಮೂವರಿಗೆ ಗೌರವ ಡಾಕ್ಟರೇಟ್

Untitled(3)
Published on

ಕೋಲಾರ: ಹಿರಿಯ ನಟ ಅನಂತ್ ನಾಗ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ವತಿಯಿಂದ ನಿರ್ಧಾರಿಸಲಾಗಿದೆ ಎಂದು ವಿವಿ ಮಾಹಿತಿ ನೀಡಿದೆ.

ನಟ ಅನಂತ್ ನಾಗ್, ಶಹನ್ ವಾಯ್ ವಾದಕ ಎಸ್.ಬಲ್ಲೇಶ್ ಭಜಂತ್ರಿ ಹಾಗೂ ಯುಪಿಐ ಸಂಸ್ಥಾಪಕ ಶರತ್ ಶರ್ಮ ಅವರಿಗೆ ಡಾಕ್ಟರೇಟ್ ಪದವಿ ನೀಡಲು ನಿರ್ಧರಿಸಲಾಗಿದೆ. ಕೋಲಾರದ ನಂದಿನಿ ಪ್ಯಾಲೇಸ್‌ನಲ್ಲಿ ನಾಳೆ ನಡೆಯಲಿರುವ ವಿ.ವಿಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ ಭಾಗಿಯಾಗಲಿದ್ದಾರೆ.

ಈ ಬಗ್ಗೆ ಬೆಂಗಳೂರು ಉತ್ತರ ವಿವಿಯ ಕುಲಪತಿ ಪ್ರೊ. ನಿರಂಜನ ವಾನಳ್ಳಿ ಮಾಹಿತಿ ನೀಡಿದ್ದು, ಉತ್ತರ ವಿಶ್ವವಿದ್ಯಾನಿಲಯದ ಎರಡನೇ ಘಟಿಕೋತ್ಸವ ಇದಾಗಿದೆ. ಶಾಹನಾಯ್ ವಾದಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಎಸ್. ಬಲ್ಲೇಶ್ ಭಜಂತ್ರಿ, ಬೆಂಗಳೂರಿನ ಯುಪಿಐ ಸಾಪ್ಟ್​​ವೇರ್ ಕಂಪನಿಯ ಸಹ ಸಂಸ್ಥಾಪಕ ಶರತ್ ಶರ್ಮ ಅವರಿಗೂ ಡಾಕ್ಟರೇಟ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net