ಕಾಮಗಾರಿ ಅಪೂರ್ಣ, ತರಾತುರಿಯಲ್ಲಿ ಲೋಕಾರ್ಪಣೆಗೊಂಡ ರಾಜ್ಯದ ಎರಡನೇ ಗೋಶಾಲೆ

Untitled
Published on

ವಿಜಯಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲೆಗೊಂದು ಸರ್ಕಾರಿ ಗೋಶಾಲೆ ನಿರ್ಮಾಣ ಯೋಜನೆ ತರಾತುರಿಯಲ್ಲಿ ಉದ್ಘಾಟನೆಗೊಳ್ಳುತ್ತಿದೆಯಾ ಎಂಬ ಅನುಮಾನ ಮೂಡುವಂತೆಯಾಗಿದೆ.

ಗುರುವಾರ ರಾಜ್ಯದ ಎರಡನೇ ಗೋಶಾಲೆಯಾದ ಜಿಲ್ಲೆಯ ಬುರಾಣಪುರದ ಗೋಮಾತಾ ಧಾಮ ಉದ್ಘಾಟನೆಗೊಂಡಿದ್ದೇನೋ ಸರಿ. ಆದರೆ ಈ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ‘
ಒಂದೆಡೆ ಸಚಿವ ಪ್ರಭು ಚವಾಣ್ ಉದ್ಘಾಟನೆ ನೆರವೇರಿಸುತ್ತಿದ್ದರೆ, ಇನ್ನೊಂದೆಡೆ ಕಾರ್ಮಿಕರು ಕಾಮಗಾರಿ ಕೈಗೊಂಡಿರುವುದು ಕಂಡು ಬಂತು. ಸುಮಾರು 10 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಗೋಮಾತಾ ಧಾಮದ ಬಹಳಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ.

ನೀರಿನ ಹೊಂಡ ನಿರ್ಮಿಸಲಾಗಿದ್ದು ಇನ್ನೂ ನೀರು ತುಂಬಿಸಿಲ್ಲ. ಮುಖ್ಯದ್ವಾರ, ತಡೆಗೋಡೆಯ ಪ್ಯಾಚ್ ವರ್ಕ್ ಇನ್ನೂ ಪ್ರಗತಿಯಲ್ಲಿದೆ. ಕೊಠಡಿ ಕಾಮಗಾರಿ, ಮೇವಿನ ಶೆಡ್ ಗಳ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ. ಆದರೂ ಸಚಿವರು ಉದ್ಘಾಟನೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net