ತಾಳ್ಮೆಯಿಂದ ಮಹಾನ್ ಸಿದ್ಧಿ ಸಾಧ್ಯ

3-ANP1-P swamkji
ಕೆಂಜಗಾಪುರದಲ್ಲಿ ನಡೆದ ಶ್ರಾವಣ ಮಾಸ ಪೂಜೆ ಮತ್ತು ಧರ್ಮಸಭೆಯಲ್ಲಿ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಗಂಗಾಧರಯ್ಯ, ಸಿದ್ದಲಿಂಗ ಸ್ವಾಮಿ ಇದ್ದರು.
Published on

ಆನಂದಪುರ: ತಾಳ್ಮೆಯಿಂದ ಬದುಕು ಸಾಗಿಸಿದರೆ ಜೀವನದಲ್ಲಿ ಏನಾದರೂ ಸಾಧನೆ ಸಾಧ್ಯ ಎಂದು ಕೋಣಂದೂರಿನ ಶ್ರೀಶೈಲ ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಕೆಂಜಗಾಪುರದ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಶ್ರಾವಣ ಸೋಮವಾರದ ರುದ್ರಾಭಿಷೇಕ ಪೂಜೆ ಮತ್ತು ಧರ್ಮಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಬದುಕಿನಲ್ಲಿ ಕಷ್ಟ-ಸುಖ ಯಾವುದೂ ಶಾಶ್ವತವಲ್ಲ. ಅದೇ ರೀತಿ ಬಡತನ ಮತ್ತು ಸಿರಿವಂತಿಕೆ ಸಹ ಕಾಯಂ ಅಲ್ಲ. ಹೀಗಾಗಿ ಎಂತಹ ಪರಿಸ್ಥಿತಿಯಲ್ಲೂ ತಾಳ್ಮೆ ಕಳೆದುಕೊಳ್ಳದೆ ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದರು.
ಬಸವಾದಿ ಶಿವಶರಣರೂ ಬದುಕಿನ ಮೌಲ್ಯ ಮತ್ತು ಯಶಸ್ಸಿನ ಸೂತ್ರಗಳನ್ನು ಮನಮುಟ್ಟುವಂತೆ ಜನತೆಗೆ ಬಿತ್ತರಿಸಿದ್ದಾರೆ. ಶ್ರಾವಣ ಪುಣ್ಯ ಮಾಸ. ದೇವರ ಸಾನ್ನಿಧ್ಯದ ಜತೆ ಮಾನಸಿಕ ಶಾಂತಿ ಪಡೆದು ಧನ್ಯರಾಗಬೇಕು ಎಂದರು. ದೇವಾಲಯದ ಪ್ರಧಾನ ಅರ್ಚಕ ಗಂಗಾಧರಯ್ಯ, ಸಿದ್ದಲಿಂಗ ಸ್ವಾಮಿ, ಸಮಿತಿ ಅಧ್ಯಕ್ಷ ಹಾಲಸ್ವಾಮಿ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net