ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾಗಿ ಆನಂದಸ್ವಾಮಿ ಆಯ್ಕೆ

FotoJet (1)
Published on

ಪಕ್ಷದ ಜಿಲ್ಲಾ ಚುನಾವಣಾಧಿಕಾರಿ ಬಿಜೆಪಿ ಮುಖಂಡ ಮುನಿಕೃಷ್ಣ ೋಷಣೆ

 ರಾಮನಗರ : ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ಎಂ.ಎನ್. ಆನಂದಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.

ರಾಮನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಚುನಾವಣಾಧಿಕಾರಿ ಮುನಿಕೃಷ್ಣ ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕಟಿಸಿದರು. ಪಕ್ಷದ ರಾಜ್ಯ ಪರಿಷತ್ತಿನ ಸದಸ್ಯರಾಗಿ ಆರ್.ವಿ. ಸುರೇಶ್ ಆಯ್ಕೆಯಾಗಿದ್ದಾರೆ ಎಂದು ಅವರ ಹೆಸರನ್ನು ಘೋಷಿಸಿದರು.

ದೇಶದಾದ್ಯಂತ ಪಕ್ಷದ ಸಂಘಟನಾ ಪರ್ವ ನಡೆಯುತ್ತಿದೆ. ನಾಲ್ಕು ವಿಧಾನಸಭಾ ಕ್ಷೇತ್ರದ ರಾಮನಗರ ಜಿಲ್ಲೆಯಲ್ಲಿ 7 ಮಂಡಳಗಳಿವೆ. ಇವುಗಳ ಅಧ್ಯಕ್ಷರು, ಜಿಲ್ಲಾ ಮತ್ತು ಮಂಡಳದ ಪದಾಧಿಕಾರಿಗಳು ಹಾಗೂ ಹಿರಿಯ ಕಾರ್ಯಕರ್ತರ ಅಭಿಪ್ರಾಯ ಆಧರಿಸಿ ಆನಂದಸ್ವಾಮಿ ಅವರನ್ನು ಮತ್ತೆ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಮುನಿಕೃಷ್ಣ ತಿಳಿಸಿದರು.

ಆನಂದಸ್ವಾಮಿ ಅವರ ಅಧಿಕಾರಾವಧಿ 3 ವರ್ಷ ಇರಲಿದೆ. ಕಳೆದ 2024ರ ಜನವರಿಯಲ್ಲಿ ಪಕ್ಷದ ಸಾರಥ್ಯ ವಹಿಸಿಕೊಂಡಿದ್ದ ಅವರು 1 ವರ್ಷ 2 ತಿಂಗಳು ಪಕ್ಷ ಸಂಘಟನೆಗಾಗಿ ಕೆಲಸ ಮಾಡಿದ್ದಾರೆ ಎಂದರು.

ಪಕ್ಷದ ಮುಖಂಡ ಗೌತಮ್ ಗೌಡ ಮಾತನಾಡಿ, ಮುಖಂಡರು ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಮರು ಆಯ್ಕೆಯಾಗಿರುವ ಆನಂದಸ್ವಾಮಿ ಅವರ ಪಕ್ಷ ಸಂಘಟನೆ ಕಾರ್ಯಕ್ಕೆ ನಾವೆಲ್ಲರೂ ಜತೆಗಿರುತ್ತೇವೆ. ಸಂಘ ಪರಿವಾರದ ಮಾರ್ಗದರ್ಶನದಲ್ಲಿ ಪಕ್ಷವನ್ನು ಬೆಳೆಸಲಾಗುವುದು ಎಂದರು.

ಆನಂದಸ್ವಾಮಿ ಮತ್ತು ಆರ್.ವಿ. ಸುರೇಶ್ ಅವರಿಗೆ ಮುಖಂಡರು ಪಕ್ಷದ ಬಾವುಟ ನೀಡಿ, ಹೂವಿನಹಾರ ಹಾಕಿ ಅಭಿನಂದಿಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಪಿ.ಎಸ್. ಜಗದೀಶ್, ಸಹ ಚುನಾವಣಾಧಿಕಾರಿ ಶಿವಾನಂದ, ರಾಜ್ಯ ವಕ್ತಾರ ರುದ್ರದೇವರು, ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರು, ಜಿಲ್ಲಾಧ್ಯಕ್ಷೆ ಪುಷ್ಪಲತಾ, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಕಾರ್ಯದರ್ಶಿ ಕಿಶನ್, ಮುಖಂಡರಾದ ಪ್ರಸಾದ್‌ಗೌಡ, ಜಗನ್ನಾಥ್, ರಾಘವೇಂದ್ರ, ನಾಗೇಶ್, ಮಂಜುನಾಥ್ ಮುಂತಾದವರಿದ್ದರು.

ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಪಕ್ಷವನ್ನು ಅಣಿಗೊಳಿಸಲಾಗುತ್ತಿದೆ. ಬೂತ್ ಮತ್ತು ವಾರ್ಡ್ ಮಟ್ಟದಿಂದ ಸದಸ್ಯತ್ವ ನೋಂದಣಿ ಆರಂಭಿಸಿ, ಕಾರ್ಯಕರ್ತರ ಪಡೆ ಕಟ್ಟಲಾಗುವುದು. - ಎಂ.ಎನ್. ಆನಂದಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net