ಜಿಲ್ಲೆಯ ಮೊದಲ ಗಣರಾಜ್ಯೋತ್ಸವ ಆನಂದ್ ಸಿಂಗ್ ಉಸ್ತುವಾರಿಯಲ್ಲೇ ನಡೆಯಬೇಕು: ಇಲ್ಲದಿದ್ರೆ ಕರಾಳ ದಿನ ಆಚರಣೆ

Anand Singh
Published on

ವಿಜಯನಗರ: ಸಚಿವ ಆನಂಸ್​​ ಸಿಂಗ್ ಅವರಿಗೆ ಉಸ್ತುವಾರಿ ಬದಲಾವಣೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಅಭಿಮಾನಿಗಳ ಆಕ್ರೋಶ ಇನ್ನೂ ಕಡಿಮೆಯಾಗಿಲ್ಲ. ಇಂದೂ ಸಹ ಸಿಂಗ್ ಅಭಿಮಾನಿಗಳು ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.

ಪುನೀತ್ ರಾಜಕುಮಾರ್ ಸರ್ಕಲ್​ನಲ್ಲಿ ಸೇರಿದ ಅಭಿಮಾನಿಗಳು, ನೂತನ ವಿಜಯನಗರ ಜಿಲ್ಲೆಯ ಅಭಿವೃದ್ಧಿಗಾಗಿ ಆನಂದ ಸಿಂಗ್ ಅವರಿಗೆ ಉಸ್ತುವಾರಿ ನೀಡಲೇಬೇಕು. ನೀಡದೇ ಇದ್ರೆ ಪ್ರತಿಭಟನೆ ಮುಂದುವರೆಯುತ್ತದೆ ಅಗತ್ಯ‌ಬಿದ್ರೆ ಹೊಸಪೇಟೆ ಬಂದ್ ಸಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ರು.

ರಾಜಕೀಯ ದಾಳಕ್ಕೆ ಆನಂದ ಸಿಂಗ್ ಅವರನ್ನು ದುರ್ಬಳಕೆ ಮಾಡಬೇಡಿ. ಹೊಸ ಜಿಲ್ಲೆಯಾದ ಬಳಿಕ‌ ಮೊದಲ ಗಣರಾಜ್ಯೋತ್ಸವದ ಧ್ವಜಾರೋಹಣ ಮಾಡೋದನ್ನು ತಪ್ಪಿಸಿದ್ದಾರೆ. ಕ್ಷೇತ್ರದ ಮತ್ತು ಹೊಸ ಜಿಲ್ಲೆಯ ಅಭಿವೃದ್ಧಿಗೆ ಆನಂದ ಸಿಂಗ್ ಅವರಿಗೆ ವಿಜಯನಗರ ಉಸ್ತುವಾರಿ ನೀಡಬೇಕೆಂದು ಆಗ್ರಹಿಸಿದ್ರು. ಈ ಬಾರಿಯ ಗಣರಾಜ್ಯೋತ್ಸವದ ಧ್ವಜಾರೋಹಣ ಆನಂದ್ ಸಿಂಗ್ ಮಾಡಬೇಕು. ಇಲ್ಲವಾದರೆ ನಾವು ಕರಾಳದಿನ ಆಚರಣೆ ಮಾಡುತ್ತೇವೆ ಅಂತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಸಹ ಹಾಕಿದ್ದಾರೆ.

ನಿನ್ನೆ ಟೈರ್​ಗೆ ಬೆಂಕಿಹಚ್ಚಿ ಪ್ರತಿಭಟನೆ ಮಾಡಿದ ವೇಳೆ ಆನಂದ ಸಿಂಗ್ ಅವರು ಸ್ವತಃ ಬಂದು ಪ್ರತಿಭಟನೆ ತಡೆದಿದ್ರು. ನಿನ್ನೆ ಕರೊನಾ ನಿಯಮ ಮೀರಿ ಪ್ರತಿಭಟನೆ ಮಾಡಿದ ಹಲವರ ವಿರುದ್ಧ ಹೊಸಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net