ಕಾಲಕಾಲಕ್ಕೆ ಅಗತ್ಯ ಕಣ್ಣಿನ ಪರೀಕ್ಷೆ: ಡಾ. ಮಧುಕರ್ ಸಲಹೆ

Bel_Eye Test
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಮತ್ತು ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಸಹಬಾಗಿತ್ವದಲ್ಲಿ, ನೇತ್ರ ಜ್ಯೋತಿ ಚಾರಿಟೆಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ (ಅಂಧತ್ವ ನಿವಾರಣಾ ವಿಭಾಗ), ಶ್ರೀ ದೇವಿ ಆಪ್ಟಿಕಲ್ ಸಂತೆಕಟ್ಟೆ ಬೆಳ್ತಂಗಡಿ ಹಾಗೂ ರಾಜಕೇಸರಿ ಸಂಘಟನೆಯ 552ನೇ ಸೇವಾ ಯೋಜನೆಯ ಪ್ರಯುಕ್ತ ಸಂತೆಕಟ್ಟೆ ಒಳಾಂಗಣದಲ್ಲಿ ಸೋಮವಾರ ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರಚಿಕಿತ್ಸೆ ಶಿಬಿರ ನಡೆಯಿತು.

ಖ್ಯಾತ ನೇತ್ರವೈದ್ಯ ಡಾ.ಮಧುಕರ್ ಮಾತನಾಡಿ ಇಂದಿನ ಒತ್ತಡದ ಯುಗದಲ್ಲಿ ಕಣ್ಣಿನ ರಕ್ಷಣೆ ಬಹಳ ಅಗತ್ಯವಿದೆ. ಪ್ರತಿಯೊಬ್ಬರೂ ಕಾಲಕಾಲಕ್ಕೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ರಾಜಕೇಸರಿ ಸಂಘಟನೆ ಹಲವಾರು ವರ್ಷಗಳಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ ಮಾಡಿ ಜನಸಾಮಾನ್ಯರಿಗೆ ನೆರವು ನೀಡುತ್ತಿದೆ ಎಂದರು. ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ, ವಿಜಯವಾಣಿ ಪತ್ರಿಕೆಯ ವರದಿಗಾರ ಮನೋಹರ್ ಬಳಂಜ ಉದ್ಘಾಟಿಸಿದರು. ರಾಜಕೇಸರಿ ಸಂಘಟನೆಯ ಸಂಚಾಲಕ ಪ್ರೇಮ್‌ರಾಜ್ ರೋಶನ್ ಸಿಕ್ವೇರಾ ಪ್ರಾಸ್ತಾವಿಕ ಮಾತನಾಡಿದರು. ನೇತ್ರ ವೈದ್ಯರಾದ ಡಾ.ಕ್ರೀನಾ, ತಾಪಂ ಸಂಯೋಜಕ ಜಯಾನಂದ ಲಾಯಿಲ, ಬಳಂಜ ಅಟ್ಲಾಜೆ ಸರ್ವೋದಯ ಫ್ರೆಂಡ್ಸ್‌ನ ಅಧ್ಯಕ್ಷ ಸುರೇಶ್ ಹೇವ, ಉದ್ಯಮಿ ಶ್ರೀಕೇಶ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು. ರಾಜಕೇಸರಿ ಸಂಘಟನೆಯ ಸಂಚಾಲಕ ಪ್ರೇಮ್‌ರಾಜ್ ಸಿಕ್ವೇರಾ ಪ್ರಾಸ್ತಾವಿಕ ಮಾತನಾಡಿದರು. ಪ್ರತೀಕ್ಷಾ ದೀಪಕ್ ಜಿ ಸ್ವಾಗತಿಸಿದರು. ನೂರಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.

ರಾಜಕೇಸರಿ ಸಂಘಟನೆ ಕಳೆದ ಇಪ್ಪತ್ತು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಅನಾರೋಗ್ಯ ಪೀಡಿತರಿಗೆ ನೆರವು, ನಿರಾಶ್ರಿತರಿಗೆ ಮನೆ, ಸರ್ಕಾರಿ ಶಾಲಾ ಶೌಚಾಲಯ ಸ್ವಚ್ಛತೆ, ಸರ್ಕಾರಿ ಶಾಲೆಗೆ ಕೊಡುಗೆ, ಉಚಿತ ಸಾಮೂಹಿಕ ವಿವಾಹ, ರಕ್ತದಾನ ಶಿಬಿರ, ಸಾಧಕರನ್ನು ಗುರುತಿಸುವ ಕಾರ್ಯಕ್ರಮದೊಂದಿಗೆ ಉಚಿತ ಆರೋಗ್ಯ ಶಿಬಿರಗಳನ್ನು ಮಾಡುತ್ತಿದ್ದು ,ಇದೊಂದು ಸಮಾಜ ಮೆಚ್ಚುವ ಕಾರ್ಯ.ಇದರ ಸ್ಥಾಪಕಾದ್ಯಕ್ಷ ದೀಪಕ್ ಜೀವನವನ್ನು ಸಮಾಜ ಸೇವೆಗೆ ಮೀಸಲಿಟ್ಟ ಸಾಧಕ. - ಮನೋಹರ್ ಬಳಂಜ, ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net