ಮಾನವತೆಯ ಕಡೆಗೆ ಹೆಜ್ಜೆ ಹಾಕುವ ಪ್ರಯತ್ನ

Ull_SVP
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಬದುಕಿನಲ್ಲಿ ಆತಂಕ, ಸವಾಲುಗಳು ಸಹಜ. ಎಲ್ಲ ಕಾಲದ ಸಮಾಜದಲ್ಲೂ ಭಯ, ಕ್ರೌರ್ಯ, ಅನಾಚಾರಗಳು ಸಾಮಾನ್ಯ. ಆದರೆ ಅದನ್ನೇ ಮುಂದಿಟ್ಟುಕೊಂಡು ಭರವಸೆ ಕಳೆದುಕೊಳ್ಳದಿರೋಣ. ನಮ್ಮ ನಡವಳಿಕೆ ಮತ್ತು ಬರವಣಿಗೆ ಮೂಲಕ ಇವುಗಳನ್ನು ಮೀರುವ, ವಾನವತೆಯ ಕಡೆಗೆ ಹೆಜ್ಜೆ ಹಾಕುವ ಪ್ರಯತ್ನ ಮುಂದುವರಿಸೋಣ ಎಂದು ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ಉಪನ್ಯಾಸಕಿ ಸುಲೋಚನಾ ಪಚ್ಚಿನಡ್ಕ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೋಮವಾರ ‘ಭಿತ್ತಿ’ ದಿನ ಕಾರ್ಯಕ್ರಮದಲ್ಲಿ ವಾರ್ಷಿಕ ಚಟುವಟಿಕೆ ಬಿಡುಗಡೆಗೊಳಿಸಿ ಬರವಣಿಗೆಯ ಮಹತ್ವದ ಕುರಿತು ಉಪನ್ಯಾಸ ನೀಡಿದರು.

ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ನಾಗಪ್ಪ ಗೌಡ, ಡಾ.ಧನಂಜಯ ಕುಂಬ್ಳೆ, ಡಾ.ಯಶುಕುವಾರ್ ಉಪಸ್ಥಿತರಿದ್ದರು. ಭಿತ್ತಿ ಸಂಪಾದಕಿ ಸಂಧ್ಯಾ ಎನ್. ಸ್ವಾಗತಿಸಿದರು. ಉಪಸಂಪಾದಕಿ ಪ್ರತೀಕ್ಷಾ ನಿರೂಪಿಸಿದರು. ಪೂಜಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net