ಎಲ್ಲ ಕಡೆಯಿಂದ ತುಳಿಯುವ ಯತ್ನ

7MNL1
Published on

ಮುನವಳ್ಳಿ: ಸತ್ಯ ಮತ್ತು ನೇರವಾಗಿ ಮಾತನಾಡಿದ್ದರಿಂದ ನನ್ನನ್ನು ತುಳಿಯುವ ಯತ್ನ ನಡೆದಿದ್ದು, ನಾನು ಬಗ್ಗುವುದಿಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಪಟ್ಟಣದ ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಪಂಚನಗೌಡ ದ್ಯಾಮನಗೌಡ್ರ ನಿವಾಸದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿಮಾನಿಗಳು ಹಾಗೂ ಹಿಂದುಪರ ಸಂಟನೆಗಳ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಹಿಂದುಗಳಿಗೆ ರಣೆ ಇಲ್ಲದಂತಾಗಿದೆ. ಹಿಂದುತ್ವ ಉಳಿದರೆ ಸನಾತನ ಧರ್ಮ ಹಾಗೂ ಭಾರತ ಉಳಿಯುತ್ತದೆ. ಹೀಗಾಗಿ, ಹಿಂದುತ್ವ ಉಳಿವಿಗೆ ಹೋರಾಡಬೇಕು. ಸಮುದಾಯದ ಮೀಸಲಾತಿಗಾಗಿ ಉಸಿರು ಇರೋವರೆಗೂ ಹೋರಾಡುತ್ತೇನೆ. ರಾಜ್ಯದಲ್ಲಿ ಸಂಚರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ನೇರ ನಡೆ, ನುಡಿಯ ನಾಯಕನನ್ನು ಬಿಜೆಪಿ ಉಚ್ಚಾಟಿಸಿದ್ದು ಸರಿಯಲ್ಲ. ಸಮುದಾಯದ ಪರ ಸದಾ ಧ್ವನಿ ಎತ್ತುವ ಬಸನಗೌಡ ಪಾಟೀಲ ಯತ್ನಾಳ ಬೆನ್ನಿಗೆ ನಾನಿದ್ದೇನೆ. ಯತ್ನಾಳ ವ್ಯಕ್ತಿ ಅಲ್ಲ ಸಮಾಜದ ಶಕ್ತಿಯಾಗಿದ್ದಾರೆ ಎಂದರು.

ಮುಖಂಡ ಪಂಚನಗೌಡ ದ್ಯಾಮನಗೌಡರ, ಪುರಸಭೆ ಸದಸ್ಯ ಸುಭಾಷ ಗೀದಿಗೌಡ್ರ ಮಾತನಾಡಿ, ಬಸನಗೌಡ ಪಾಟೀಲ ಯತ್ನಾಳರನ್ನು ಕೂಡಲೇ ಬಿಜೆಪಿಗೆ ಮರುಸೇರ್ಪಡೆ ಮಾಡಬೇಕೆಂದು ಆಗ್ರಹಿಸಿದರು.

ಎಂ.ಕೆ.ಹಿರೇಮಠ, ಪಂಚಪ್ಪ ಹನಸಿ, ಅರುಣಗೌಡ ಪಾಟೀಲ, ಅಶೋಕಗೌಡ ಪಾಟೀಲ, ಮಲ್ಲೇಶ ಸುಳೆಭಾವಿ, ಶ್ರೀಕಾಂತ ಮಲಗೌಡ್ರ, ಗುರು ಚಂದರಗಿ, ರಮೇಶ ಗಂಗಣ್ಣವರ, ಮಹಾಂತೇಶ ಗೋಕಾಕ, ಶಿವು ರೇವಡಗಿ, ರಾಜು ಕಿಲ್ಲೇದಾರ, ಪಂಚಪ್ಪ ಗುಂಡ್ಲೂರ, ಸುರೇಶ ಜಾವೂರ, ಮಂಜು ಹನಸಿ, ಬಸು ಶಿಗ್ಗಾಂವಿ, ಗೌತಮ ದ್ಯಾಮನಗೌಡ್ರ, ಶೇಖರ ಗೋಕಾಂವಿ, ಎ.ವಿ.ನರಗುಂದ, ಮಹೇಶ ಕಮತಗಿ, ಪಂಚು ಹೂಲಿ, ಉಮೇಶ ದಂಡಿನ, ಬಾಪು ಕದಂ, ಬಾಳು ಹೊಸಮನಿ, ಮುತ್ತು ಮೇಟಿ, ಅಶೋಕ ರಡ್ರಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net