ರಂಜಿಸಿದ ಚಿಣ್ಣರ ವೇಷ ಭೂಷಣ

19-kkr1(8-25
ಕಿಕ್ಕೇರಿ ಕೋಟೆ ಗಣಪತಿ ಬೀದಿಯ 3ನೇ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಮಕ್ಕಳು ರಾಧಾ, ಕೃಷ್ಣ, ರುಕ್ಮಿಣಿ ವೇಷಭೂಷಣ ಧರಿಸಿ ಸಂಭ್ರಮಿಸಿದರು. ಜ್ಯೋತಿ, ಪಾಲಕರು ಹಾಜರಿದ್ದರು.
Published on

ಕಿಕ್ಕೇರಿ: ಇಲ್ಲಿನ ಕೋಟೆ ಗಣಪತಿ ಬೀದಿಯ 3ನೇ ಅಂಗನವಾಡಿ ಕೇಂದ್ರದಲ್ಲಿ ಪುಟಾಣಿ ಮಕ್ಕಳು ಕೃಷ್ಣ, ರಾಧಾ, ರುಕ್ಮಿಣಿ ಉಡುಗೆ ತೊಡುಗೆ ಧರಿಸಿ ನಲಿದಾಡಿದರು.

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ರಾಧಾ ಕೃಷ್ಣ ವೇಷಭೂಷಣ ಸ್ಪರ್ಧೆಯಲ್ಲಿ ಮಕ್ಕಳು ಲವಲವಿಕೆಯಿಂದ ಭಾಗವಹಿಸಿದ್ದರು. ಮಕ್ಕಳಿಗೆ ಕೃಷ್ಣ, ರಾಧಾ, ರುಕ್ಮಿಣಿಯ ವೇಷಭೂಷಣವನ್ನು ಪಾಲಕರು ತೊಡಿಸಿ, ಶಾಲೆಗಳಲ್ಲಿ ಭಾಗವಹಿಸಿ ರಂಜಿಸಿದರು.

ಪಾಲಕರು ತಮ್ಮ ಕಂದಮ್ಮಗಳು ಸ್ಪರ್ಧೆಯಲ್ಲಿ ವಿಜೇತರಾಗಬೇಕು ಎಂದು ಪರಸ್ಪರ ಪೈಪೋಟಿಯಲ್ಲಿ ಮಕ್ಕಳಿಗೆ ಉಡುಗೆ ತೊಡುಗೆ ತೊಡಿಸಿದ್ದರು. ಕೊಳಲು, ಕಚ್ಚೆ, ಕಿರೀಟ, ಡಾಬು ಮತ್ತಿತರ ವಸ್ತುಗಳಿಗಾಗಿ ಅಂಗಡಿಗಳಲ್ಲಿ ತಡಕಾಡಿದರು. ಹಲವರು ಕಷ್ಟಪಟ್ಟು ಮನೆಗಳಲ್ಲಿ ಉಡುಗೆ ತೊಡುಗೆ ತಯಾರಿ ಮಾಡಿದ್ದರು.

ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ನಮ್ಮ ಧಾರ್ಮಿಕ ಇತಿಹಾಸ, ಕೃಷ್ಣನ ಆದರ್ಶ, ಬಾಲ್ಯದ ತುಂಟಾಟ ಎಲ್ಲವನ್ನೂ ಪರಿಚಯ ಮಾಡಿಕೊಡಬೇಕಿದೆ. ಇಡೀ ಸಮುದಾಯ ಮಹಾಭಾರತ, ರಾಮಾಯಣ ಕಥಾಸಾರದಲ್ಲಿ ನಿಂತಿದೆ. ಕುರುಕ್ಷೇತ್ರ, ಕೃಷ್ಣನ ಪಾತ್ರ ಎಲ್ಲವನ್ನು ಮಕ್ಕಳಿಗೆ ತಿಳಿಸಿಕೊಡಬೇಕಿದೆ. ಮಕ್ಕಳು ಇದರ ಕಥಾಸಾರ ತಿಳಿದರೆ ಮುಂದಿನ ದಿನದಲ್ಲಿ ಉತ್ತಮ ಸತ್ಪ್ರಜೆಗಳಾಗಲು ಸಾಧ್ಯ ಎಂದರು.

ಮಕ್ಕಳಿಗೆ ಕೃಷ್ಣ, ರಾಧಾ, ರುಕ್ಮಿಣಿಯ ವೇಷಭೂಷಣವನ್ನು ಪಾಲಕರು ಮನೆಯಲ್ಲಿ ತೊಡಿಸಿ, ಶಾಲೆಗಳಲ್ಲಿ ಭಾಗವಹಿಸಿ ಕೃಷ್ಣ ಜನ್ಮಾಷ್ಟಮಿಗೆ ಮೆರುಗು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net