

ಕೋಟ: ಕೋಟ ಅಮೃತೇಶ್ವರಿ ದೇಗುಲ ವತಿಯಿಂದ ಶ್ರೀ ಅಮೃತೇಶ್ವರಿ ದಶಾವತಾರ ಯಕ್ಷಗಾನ ಮೇಳದ ಈ ವರ್ಷದ ತಿರುಗಾಟದ ಪ್ರಥಮ ದೇವರ ಸೇವೆ ಆಟ ನ.17ರಂದು ದೇಗುಲದಲ್ಲಿ ನಡೆಯಲಿದ್ದು, ಮಂಗಳವಾರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್ ಆಮಂತ್ರಣ ಬಿಡುಗಡೆಗೊಳಿಸಿದರು. ಸಮಿತಿ ಸದಸ್ಯರಾದ ಕೆ.ಸುಬ್ರಾಯ ಜೋಗಿ, ಎಂ.ಶಿವ ಪೂಜಾರಿ, ಕೆ.ಚಂದ್ರಶೇಖರ್ ಆಚಾರ್, ಗಣೇಶ ನೆಲ್ಲಿಬೆಟ್ಟು, ಸುಭಾಸ್ ಶೆಟ್ಟಿ, ಸುಧಾ ಪೂಜಾರಿ, ಜ್ಯೋತಿ ದೇವದಾಸ್ ಕಾಂಚನ್, ವ್ಯವಸ್ಥಾಪಕ ಗಣೇಶ್ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.