

ಶಿರ್ವ: ಇಂದಿನ ಯುಗದಲ್ಲಿ ಶಿಕ್ಷಣ ಹಾಗೂ ಮೂಲ ಸೌಕರ್ಯಗಳು ಎಷ್ಟು ಅಗತ್ಯವೋ ಅಷ್ಟೇ ಪ್ರಮಾಣದಲ್ಲಿ ಆರೋಗ್ಯವೂ ಅಗತ್ಯ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಶಿರ್ವದ ವಿದ್ಯಾವರ್ಧಕ ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಟ್ಟೆ ವಿಶ್ವವಿದ್ಯಾಲಯದ ಜಸ್ಟೀಸ್ ಕೆ.ಎಸ್.ಹೆಗ್ಡೆ ಗ್ರಾಮೀಣ ಆರೋಗ್ಯ ಕೇಂದ್ರದ ಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಶಿರ್ವ ವಿದ್ಯಾವರ್ಧಕ ಸಂಘ ಆಡಳಿತಾಧಿಕಾರಿ ಪ್ರೊ.ಭಾಸ್ಕರ್ ಶೆಟ್ಟಿ ಮಾತನಾಡಿದರು.
ಶಿರ್ವ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಿ.ಸುಬ್ಬಯ್ಯ ಹೆಗ್ಡೆ, ಸದಸ್ಯರಾದ ಮಟ್ಟಾರು ರತ್ನಾಕರ ಹೆಗ್ಡೆ, ಜಗದೀಶ್ ಅರಸ, ಡಾ.ಎ.ರವೀಂದ್ರನಾಥ್ ಶೆಟ್ಟಿ, ನಿಟ್ಟೆ ಗ್ರಾಮೀಣ ಆರೋಗ್ಯ ಕೇಂದ್ರಗಳ (ಕ್ಷೇಮ) ಸಂಯೋಜಕ ಮೇಜರ್ ಡಾ.ರಾಘವೇಂದ್ರ ಹುಚ್ಚಪ್ಪನವರ್, ನಿಟ್ಟೆ ಡೆಂಟಲ್ ವಿಭಾಗದ ಮುಖ್ಯಸ್ಥೆ ಡಾ.ಆಡ್ರೀ ಡಿ’ಕ್ರೂಜ್, ಶಿರ್ವ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಸಜ್ಞಾ ಶೆಟ್ಟಿ, ಡಾ.ನಿವೇದಿತಾ, ಶಿರ್ವ ಹಿಂದು ಜೂನಿಯರ್ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಕಿಶೋರ್ ಶೆಟ್ಟಿ, ಸಚ್ಚಿದಾನಂದ ಹೆಗ್ಡೆ, ಪ್ರಸಾದ್ ಶೆಟ್ಟಿ ಕುತ್ಯಾರು, ನವೀನ್ ಶೆಟ್ಟಿ ಕುತ್ಯಾರು, ರಮಾನಂದ ಶೆಟ್ಟಿಗಾರ್, ಶಿರ್ವ ಬಂಟರ ಸಂಘದ ವೀರೇಂದ್ರ ಶೆಟ್ಟಿ, ವಿಶ್ವಬ್ರಾಹ್ಮಣ ಸಂಘದ ಅಧ್ಯಕ್ಷ ಉಮೇಶ ಆಚಾರ್ಯ, ಮಹಿಳಾ ಮಂಡಲ ರೋಟರಿ ಮತ್ತು ಲಯನ್ಸ್ ಸಂಸ್ಥೆಯ ಸದಸ್ಯರು ನಿಟ್ಟೆ ವಿಶ್ವವಿದ್ಯಾಲಯದ ಅಧಿಕಾರಿಗಳು, ಆರೋಗ್ಯ ಕೇಂದ್ರದ ಸಿಬ್ಬಂದಿ, ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಉದ್ಯೋಗಿಗಳು ಉಪಸ್ಥಿತರಿದ್ದರು. ಆರೋಗ್ಯ ಕೇಂದ್ರದ ಸಿಬ್ಬಂದಿ ವಿದ್ಯಾ ಸ್ವಾಗತಿಸಿ, ಡೆಂಟಲ್ ಟೆಕ್ನೀಷಿಯನ್ ಜ್ಯೋತಿಲಕ್ಷ್ಮೀ ವಂದಿಸಿದರು. ಉಪನ್ಯಾಸಕಿ ಸುಪ್ರೀತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ನಾಲ್ಕು ಜಿಲ್ಲೆಗಳಲ್ಲಿ ನಿಟ್ಟೆ ವಿವಿಯ 23 ಗ್ರಾಮೀಣ ಆರೋಗ್ಯ ಕೇಂದ್ರಗಳು ಕಾರ್ಯಾಚರಿಸುತ್ತಿದ್ದು, ತಿಂಗಳಿಗೆ ಅಂದಾಜು ಎರಡು ಲಕ್ಷ ಜನಕ್ಕೆ ಸೇವೆ ನೀಡುತ್ತಿವೆ. ಮೇಲ್ದರ್ಜೆಯ ಲ್ಯಾಬೊರೇಟರಿಗಳ ಮೂಲಕ ಇಸಿಜಿ ಹಾಗೂ ಟೆಲಿ ಕಾರ್ಡಿಯಾಲಜಿ ವ್ಯವಸ್ಥೆಯೊಂದಿಗೆ ಗ್ರಾಮೀಣ ಜನರ ಸೇವೆಯಲ್ಲಿ ತೊಡಗಿಸಿಕೊಂಡಿವೆ. -ಡಾ.ಸತೀಶ್ ಕುಮಾರ್ ಭಂಡಾರಿ ನಿಟ್ಟೆ ವಿಶ್ವವಿದ್ಯಾಲಯ ನಿವೃತ್ತ ಕುಲಪತಿ https://www.vijayavani.net/development-of-leadership-qualities https://www.vijayavani.net/monkeys-in-plantations