

ಬೆಂಗಳೂರು: ಇಂದು ಬೆಂಗಳೂರು ನಗರಕ್ಕೆ ಐತಿಹಾಸಿಕ ದಿನವಾಗಿದೆ ಈ ನಾಡು ಕಂಡ ಇಬ್ಬರು ಮಹಾನ್ ಪುರುಷರ ಪ್ರತಿಮೆ ಅನಾವರಣ ಮಾಡಿ ನಾನು ಸೌಭಾಗ್ಯಶಾಲಿ ಆಗಿದ್ಧೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.
ಬೆಂಗಳೂರು ಹಬ್ಬ ಸಮಾರೋಪ ಸಮಾರಂಭವನ್ನ ಉದ್ದೇಶಿಸಿ ಮಾತನಾಡಿದ ಅಮಿತ್ ಷಾ ಇಬ್ಬರು ಮಹಾಪುರುಷರ ಅಶ್ವಾರೂಢ ಪ್ರತಿಮೆ ಅನಾವರಣ ಆಗಿದೆ ಅವರ ಸಂದೇಶ ಇಡೀ ದೇಶಕ್ಕೆ ಕೊಂಡೊಯ್ಯುವ ಕೆಲಸ ಆಗಿದೆ. ವಿಧಾನಸಭೆಗೆ ಬರುವ ಪ್ರತಿಯೊಬ್ಬ ಸದಸ್ಯರು ಇವರಿಬ್ಬರ ತತ್ವ, ಸಂದೇಶ ಅಳವಡಿಸಿಕೊಳ್ಳಬೇಕು ಎಂದು ಕರೆ ಕೊಟ್ಟಿದ್ದಾರೆ.
ಜಗಜ್ಯೋತಿ ಬಸವೇಶ್ವರ ಪ್ರತಿಮೆ ಇಡೀ ಜಗತ್ತಿಗೆ ಸಂದೇಶ ನೀಡಲಿದೆ. ಬಸವಣ್ಣನವರು ಮಹಿಳೆಯರಿಗೆ ಸಮಾನ ಸ್ಥಾನ ನೀಡಿದರು, ಅನುಭವ ಮಂಟಪದಲ್ಲಿ ಮಹತ್ವದ ವಿಚಾರಗಳು ಚರ್ಚೆ ಆಗುತ್ತಿದ್ದವು. ಇಡೀ ಜಗತ್ತಿನಲ್ಲಿ ಮೊದಲು ಲೋಕತಂತ್ರ ಆರಂಭ ಆಗಿದ್ದು ಭಾರತದಲ್ಲಿ ಆದರ್ಶ ಜೀವನ ಬಸವಣ್ಣನವರ ವಚನದ ಮೇಲೆ ರೂಪಿತವಾಗಿದೆ ಎಂದು ಹೇಳಿದ್ದಾರೆ.
ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡಿದ್ರು, ಕೆರೆ ನಿರ್ಮಾಣ ಮಾಡಿದ್ರು, ಇಂದು ಬೆಂಗಳೂರನ್ನ ಇಡೀ ವಿಶ್ವವೇ ನೋಡುತ್ತಿದೆ. ಇಂದು ಬೆಂಗಳೂರು ಹಬ್ಬ ಮಾಡಿದ್ದಾರೆ. ಇವರಿಬ್ಬರ ಪ್ರತಿಮೆ ವಿಧಾನಸೌಧಕ್ಕೆ ಸದಾ ಚೇತನವನ್ನ ನೀಡಲಿದೆ ಎಂದು ಬಣ್ಣಿಸಿದ್ದಾರೆ.
ಡಬಲ್ ಎಂಜಿನ್ ಸರ್ಕಾರ ಕಳೆದ 4 ವರ್ಷದಲ್ಲಿ ಅಭಿವೃದ್ಧಿಯ ಹಾದಿಯಲ್ಲಿ ಕರ್ನಾಟಕವನ್ನ ಮುನ್ನೆಡಿಸಿದೆ. ಯಡಿಯೂರಪ್ಪ ನವರು ಕರೊನಾ ಸಂದರ್ಭವನ್ನ ಸಮರ್ಥವಾಗಿ ನಿಭಾಯಿಸಿದ್ದರು. ಅವರ ನಂತರ ಬಸವರಾಜ್ ಬೊಮ್ಮಾಯಿ ಅವರು ಉತ್ತಮ ಆಡಳಿತ ನಡೆಸಿಕೊಂಡು ಬಂದಿದ್ದಾರೆ.
ಕಳೆದ ಬಾರಿ 104 ಸ್ಥಾನ ನೀಡಿದ್ರಿ ಇದರಿಂದ ಆರಂಭದಲ್ಲಿ ತೊಂದರೆ ಆಯ್ತು ಆದರೆ ಈ ಬಾರಿ ಪೂರ್ಣ ಬಹುಮತ ನೀಡಿ ಬಿಜೆಪಿಯನ್ನ ಅಧಿಕಾರಕ್ಕೆ ತನ್ನಿ ಪೂರ್ಣ ವಿಕಾಸಕ್ಕೆ ಅವಕಾಶ ನೀಡಬೇಕು ಎಂದು ವಿನಂತಿಸಿದ್ದಾರೆ.
ಕರ್ನಾಟಕದ ವಿಕಾಸಕ್ಕೆ ಜಗಳ ಗಂಟ ಪಕ್ಷ ಬೇಕಾಗಿಲ್ಲ ಸಿಎಂ ಹುದ್ದೆಗೆ ಜಗಳ ಆಡೋರು ಬೆಂಗಳೂರನ ಉದ್ಧಾರ ಮಾಡಲ್ಲ. ಕಾಂಗ್ರೆಸ್‌ನ ಸರ್ಕಾರ 2009-2014ರ ಅವಧಿಯಲ್ಲಿ ಕರ್ನಾಟಕಕ್ಕೆ 94,000 ಕೋಟಿಹಣ ನೀಡಿದ್ರು. ಆದರೆ, ಪ್ರಧಾನಿ ಮೋದಿಯವರು 2014ರಲ್ಲಿ ಅಧಿಕಾರ ವಹಿಸಿಕೊಂಡ ನಂತರ 2,25,000 ಲಕ್ಷ ಸಾವಿರ ಕೋಟಿ ಅನುದಾನ ನೀಡಿದ್ದಾರೆ.
ಸೋನಿಯಾ, ಮನಹೋಹನ್ ಸರ್ಕಾರದ ವಿಚಾರ ಇಟ್ಟುಕೊಂಡು ಚರ್ಚೆಗೆ ಬನ್ನಿ, ನಮ್ಮ ಯುವ ಮೋರ್ಚಾ ಸದಸ್ಯರು ನಿಮ್ಮ ಜೊತೆ ಚರ್ಚೆ ಮಾಡ್ತಾರೆ. ಬೆಂಗಳೂರಿನಲ್ಲಿ ಪ್ರತಿಯೊಂದು ಕ್ಷೇತ್ರವೂ ಕಮಲ ಅರಳುವಂತೆ ಮಾಡಬೇಕು ಅಭಿವೃದ್ಧಿ ಪಥದತ್ತ ಮುನ್ನೆಡೆಸುತ್ತೇವೆ ನೀವೆಲ್ಲರೂ ನಮ್ಮ ಜೊತೆ ಕೈ ಜೋಡಿಸಿ ಎಂದು ಬೆಂಗಳೂರು ಹಬ್ಬ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಕರೆ ನೀಡಿದ್ದಾರೆ.