More

    ಬಸವಣ್ಣನವರ ತತ್ವಗಳನ್ನ ಜಾರಿಗೆ ತಂದವರು ಕೆಂಪೇಗೌಡರು: ಸಿಎಂ ಬೊಮ್ಮಾಯಿ ಬಣ್ಣನೆ

    ಬೆಂಗಳೂರು: ಕರ್ನಾಟಕ ರಾಜ್ಯ ಆದ 10 ವರ್ಷಗಳಲ್ಲಿ ವಿಧಾನಸೌಧ ಮುಂಭಾಗ ವಿಶ್ವಗುರು ಬಸವಣ್ಣ, ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆಯಾಗಬೇಕಿತ್ತು ಎಂದು ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಹೇಳಿದ್ಧಾರೆ.

    ಬೆಂಗಳೂರು ಹಬ್ಬ ಸಮಾರೋಪ ಸಮಾರಂಭವನ್ನು ಉದ್ಧೇಶಿಸಿ ಮಾತನಾಡಿದ ಸಿಎಂ ಬಸವಣ್ಣ, ಕೆಂಪೇಗೌಡರ ಪ್ರತಿಮೆಯನ್ನ ಶಕ್ತಿಸೌಧದ ಮುಂಭಾಗ ಸ್ಥಾಪಿಸಲು ನಾವು ಇಷ್ಟು ವರ್ಷ ತೆಗೆದುಕೊಂಡಿರುವುದಕ್ಕೆ ನಾನು ಯಾರನ್ನು ದೂಷಿಸುವುದಿಲ್ಲ ಇದು ನಮ್ಮ ಆತ್ಮಸಾಕ್ಷಿಯ ವಿವೇಚನೆಗೆ ಬಿಟ್ಟಿದ್ಧೇನೆ.

    ಬಸವಣ್ಣನವರ ತತ್ವಗಳನ್ನ ಜಾರಿಗೆ ತಂದವರು ಕೆಂಪೇಗೌಡರು: ಸಿಎಂ ಬೊಮ್ಮಾಯಿ ಬಣ್ಣನೆ

    ಇದನ್ನೂ ಓದಿ: ಬಾಯ್ಬಿಟ್ಟು ಕೆಟ್ಟಳು ಕಿಡ್ನ್ಯಾಪ್ ಮಾಡಿದ್ದ ಮಹಿಳೆ; ಸಿಕ್ಕಿ ಹಾಕಿಕೊಳ್ಳುವಂತೆ ಮಾಡಿತು ‘ಹಾಲು-ಉಪ್ಪಿಟ್ಟು’!

    ವಿಶ್ವದ ಮೊದಲ ಸಂಸತ್ತು ಅನುಭವ ಮಂಟಪವನ್ನ ಸ್ಥಾಪಿಸಿದ್ದು ಬಸವೇಶ್ವರರು ದಯಯೇ ಧರ್ಮದ ಮೂಲವಯ್ಯ ಎಂದು ಕಾಯಕ ತತ್ವವನ್ನ ಸಾರಿ ಸಮಾನತೆಯ ಬದುಕನ್ನ ತೋರಿಸಿಕೊಟ್ಟಿದ್ದಾರೆ. ಬಸವಣ್ಣನವರ ಪ್ರತಿಮೆ ವಿಧಾನಸೌಧ ಆಷ್ಟೇ ಅಲ್ಲ ಹೈಕೋರ್ಟ್​ ಎದುರು ಇದೇ ಅವರ ಮೌಲ್ಯಗಳು ಎರಡು ಕಡೆ ಇರಬೇಕು ಎಂದು ಆಶಿಸಿದ್ದಾರೆ.

    ನಾಡಪ್ರಭು ಕೆಂಪೇಗೌಡರು ಎಲ್ಲಾ ಸಮಾಜದವರನ್ನ ಒಟ್ಟೂಗೂಡಿಸಿ ಬೆಂಗಳೂರು ನಗರವನ್ನ ಕಟ್ಟಿದರು. ಬಸವಣ್ಣನವರ ತತ್ವಗಳನ್ನ ಜಾರಿಗೊಳಿಸಿದವರು ಕೆಂಪೇಗೌಡರು. ಅವರು, ಯಾವ ಕಾಲದಲ್ಲಿ ಈ ನಗರವನ್ನ ಕಟ್ಟಿದ್ದರೋ ಗೊತ್ತಿಲ್ಲಾ ಇಡೀ ವಿಶ್ವದಲ್ಲೀಯೇ ನಮ್ಮ ನಗರ ಮುಂದಿದೆ ಎಂದು ಬಣ್ಣಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts