ಅಮಿತ್ ಷಾ ಜನತೆಯ ಕ್ಷಮೆ ಕೇಳಲಿ

Oplus_131072
ನಂಜನಗೂಡು ತಾಲೂಕು ತಗಡೂರು ಗ್ರಾಮದಲ್ಲಿ ಗೌತಮ್ ಯುವಕರ ಸಂಘವನ್ನು ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಿದರು. ಹಾಡ್ಯ ರಂಗಸ್ವಾಮಿ, ಎಸ್.ಸಿ ಬಸವರಾಜು, ಬಿ.ಎನ್. ಸದಾನಂದ, ಡಾ. ಡಿ.ಜಿ. ನಾಗರಾಜು, ಗಾರ್ಡನ್ ಮಹೇಶ್, ಗುರು ಮಲ್ಲೇಶ್ ಅವರನ್ನು ಕಾಣಬಹುದು.
Published on

ನಂಜನಗೂಡು: ಅಂಬೇಡ್ಕರ್ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ದೇಶದ ಜನತೆಯ ಕ್ಷಮೆ ಕೇಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದರು.

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ಸೋಮವಾರ ಗೌತಮ್ ಯುವಕರ ಸಂಘದ ನಾಮಫಲಕ ಅನಾವರಣ ಮತ್ತು ಸಂಘದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ತಗಡೂರು ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಹೇಳಿಕೆಯನ್ನು ಇದು ಒಂದು ಸಣ್ಣ ಮಾತು ಎಂದು ಸುಮ್ಮನಾದರೆ, ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಅವರ ಬಗ್ಗೆ ಮತ್ತೆ ದೊಡ್ಡಮಟ್ಟದ ಮಾತನ್ನು ಆಡುತ್ತಾರೆ. ಅಮಿತ್ ಷಾ ಅವರು ದೇಶದ ಜನತೆಗೆ ಕ್ಷಮೆ ಕೇಳಿಕೊಂಡರೆ ಏನು ಆಗುವುದಿಲ್ಲ. ಇವರು ಕ್ಷಮೆ ಕೇಳುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ ಬಸವರಾಜು, ಜಿಪಂ ಮಾಜಿ ಸದಸ್ಯ ಬಿ.ಎನ್. ಸದಾನಂದ, ಡಾ.ಡಿ.ಜಿ. ನಾಗರಾಜು, ಆರ್.ಮಹದೇವ್, ಗ್ರಾಪಂ ಅಧ್ಯಕ್ಷೆ ಚಂದ್ರವತಿ ಬಸವರಾಜು, ಉಪಾಧ್ಯಕ್ಷ ಗುರುಮಲ್ಲೇಶ್, ಮುಖಂಡರಾದ ಗಾರ್ಡನ್ ಮಹೇಶ್, ಶಿವರಾಂ, ರಂಗಸ್ವಾಮಿ, ದೇವಣ್ಣ, ಎಚ್.ರಂಗಸ್ವಾಮಿ, ಗ್ರಾಪಂ ಸದಸ್ಯರಾದ ಸರಸ್ವತಿ, ಗಾರ್ಡನ್ ಮಹೇಶ್, ಗೌತಮಿ ಯುವಕರ ಸಂಘದ ಗೌರವಾಧ್ಯಕ್ಷರಾದ ಟಿ.ಜಿ ನವೀನ್ ಕುಮಾರ್, ಎಸ್.ಶಂಕರ್, ಅಧ್ಯಕ್ಷ ಬಿ.ಮಹದೇವ, ಉಪಾಧ್ಯಕ್ಷ ಟಿ.ಎಸ್. ಶಿವಕುಮಾರ್, ಕಾರ್ಯದರ್ಶಿ ಟಿ.ಎಂ. ಸೋಮೇಶ್, ಖಜಾಂಚಿ ಮಹದೇವಸ್ವಾಮಿ, ಕಾನೂನು ಸಲಹೆಗಾರ ರಂಗನಾಥ್, ಸಂಚಾಲಕರಾದ ಸುರೇಶ್, ಪುಟ್ಟಸ್ವಾಮಿ, ನಿರ್ದೇಶಕರಾದ ಚಂದ್ರಶೇಖರ್, ಜಯಪ್ರಕಾಶ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net