ಹಾಸನಾಂಬೆ ದರ್ಶನ ಮಾಡಿದ ಅಮೆರಿಕ ದಂಪತಿ

ಹಾಸನಾಂಬೆ ದರ್ಶನ ಮಾಡಿದ ಅಮೆರಿಕ ದಂಪತಿ
Published on

ಹಾಸನ: ಅಮೆರಿಕದ ಫ್ಲೋರಿಡಾದಿಂದ ಬಂದು ದಂಪತಿ ಹಾಸನಾಂಬ ದೇವಿಯ ದರ್ಶನ ಪಡೆದಿದ್ದಾರೆ. ಬೆಂಗಳೂರು ಮೂಲದ ರಕ್ಷಿತಾರನ್ನು ಹದಿಮೂರು ವರ್ಷಗಳ ಹಿಂದೆ ಐಯೋವಾದ ಪ್ಯಾಟ್ರಿಕ್ ವಿವಾಹವಾಗಿದ್ದಾರೆ. ಹದಿಮೂರು ವರ್ಷಗಳಿಂದ ಫ್ಲೋರಿಡಾದಲ್ಲಿ ನೆಲೆಸಿರುವ ದಂಪತಿ ಇದೇ ಮೊದಲ ಬಾರಿ ಹಾಸನಾಂಬೆಯ ದರ್ಶನ ಮಾಡಿದ್ದಾರೆ.

ಆನ್‌ಲೈನ್‌ನಲ್ಲಿ 1000 ರೂ. ವಿಶೇಷ ದರ್ಶನದ ಟಿಕೆಟ್ ಬುಕ್ ಮಾಡಿ ಇಬ್ಬರು ಮಕ್ಕಳೊಂದಿಗೆ ಆಗಮಿಸಿ ಹಾಸನಾಂಬ ದೇವಿ ದರ್ಶನದ ಪಡೆದಿದ್ದಾರೆ. ಹಾಸನಾಂಬ ದೇವಿ ದರ್ಶನದ ಬಳಿಕ ಸಿದ್ದೇಶ್ವರಸ್ವಾಮಿ ದರ್ಶನ ಪಡೆದರು. ಲೈಟಿಂಗ್ಸ್, ಫ್ಲವರ್ ಡೆಕೊರೇಷನ್ ನೋಡಿ ದಂಪತಿ ಖುಷಿಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net