ರೈತರ ಹಿತ ಕಾಯಲು ಕಾಯ್ದೆ ತಿದ್ದುಪಡಿ

6HNL1
Published on

ಹಾನಗಲ್ಲ: ರೈತರ ಹಿತ ಕಾಯುವ ನಿಟ್ಟಿನಲ್ಲಿ ರಾಜ್ಯ, ಕೇಂದ್ರ ಸರ್ಕಾರಗಳು ಕಾಯ್ದೆ ತಿದ್ದುಪಡಿ ಮಾಡುತ್ತಿವೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

ತಾಲೂಕಿನ ಚಿಕ್ಕಾಂಸಿ ಹೊಸೂರ ಗ್ರಾಮದಲ್ಲಿ ಕೃಷಿ ಮಾರುಕಟ್ಟೆ ಸಮಿತಿಯಿಂದ 73.80 ಲಕ್ಷ ರೂಪಾಯಿ ವೆಚ್ಚದಲ್ಲಿ ರೈತ ಸಂತೆ ಕಟ್ಟಡ, 18 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಉದ್ಘಾಟನೆ, ಕ್ಯಾಸನೂರು ಗ್ರಾಮದಲ್ಲಿ ಆದರ್ಶ ಗ್ರಾಮ ಯೋಜನೆಯಡಿ 40 ಲಕ್ಷ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

1956ರ ನಂತರ ಹಸಿರು ಕ್ರಾಂತಿ ಮೂಲಕ ಆಹಾರ ಉತ್ಪಾದನೆ ಹೆಚ್ಚಿಸಲಾಗಿದೆ. 65 ವರ್ಷಗಳ ನಂತರ ಆ ಕಾನೂನನ್ನು ಇಂದಿನ ಬೇಡಿಕೆ, ಉತ್ಪಾದನೆ ವ್ಯವಸ್ಥೆಗೆ ತಕ್ಕಂತೆ ತಿದ್ದುಪಡಿಗೊಳಿಸುವ ಅಗತ್ಯವಿದೆ. ಕಾನೂನುಗಳನ್ನು ರೈತರ ಹಿತಾಸಕ್ತಿಗೆ ಅನುಗುಣವಾಗಿ ಬಳಸಿಕೊಳ್ಳಲಾಗುತ್ತಿದೆ. ಜನಾದೇಶವಿಲ್ಲದ್ದರಿಂದ ಇತರ ಪಕ್ಷಗಳವರು ಇಂಥ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ತಾಲೂಕಿನಲ್ಲಿ 21 ಗ್ರಾಮಗಳನ್ನು ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಲಾಗಿದೆ. 8.81 ಲಕ್ಷ ರೂಪಾಯಿ ವೆಚ್ಚದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

ಎಪಿಎಂಸಿ ನಿರ್ದೇಶಕ ರಾಜಣ್ಣ ಪಟ್ಟಣದ ಮಾತನಾಡಿ, ತವನಂದಿ-ಜಡೆ-ಸೊರಬ ರಸ್ತೆ ಕಾಮಗಾರಿಯನ್ನು ನಮ್ಮ ತಾಲೂಕಿನ ಸುಪರ್ದಿಗೆ ಪಡೆದು ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಶಾಸಕ ಸಿ.ಎಂ. ಉದಾಸಿ ಚಿಕ್ಕಾಂಶಿ-ಹೊಸೂರ ಏತ ನೀರಾವರಿ ಕಾಮಗಾರಿಯನ್ನು ಮಂಜೂರು ಮಾಡಿಸಿದ್ದು, ಈ ಭಾಗದ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಲಾಗಿದೆ ಎಂದರು.

ತಾಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಎಪಿಎಂಸಿ ಅಧ್ಯಕ್ಷ ಶಿದ್ದಪ್ಪ ಬಂಗಾರೇರ, ಉಪಾಧ್ಯಕ್ಷೆ ಗೀತಾ ಕೋರಿ, ಗ್ರಾಪಂ ಅಧ್ಯಕ್ಷೆ ರೂಪಾ ಗಿರೇಗೌಡರ, ಉಪಾಧ್ಯಕ್ಷ ನಾಗೇಶ ಹರವಿ, ಬಿ.ಆರ್. ಪಾಟೀಲ, ಸಿದ್ದನಗೌಡ ಪಾಟೀಲ, ಶಿವಲಿಂಗಪ್ಪ ತಲ್ಲೂರ, ಶೇಕಣ್ಣ ಮಹರಾಜಪೇಟ, ರಾಮಪ್ಪ ಮಾದಪ್ಪನವರ, ನಾಗಪ್ಪ ಶಿವಣ್ಣನವರ, ಬಿ.ಇ. ಹುರಳಿ, ಗ್ರಾಪಂ ಸದಸ್ಯರಾದ ಲೀಲಾವತಿ ಈಳಿಗೇರ, ನೀಲವ್ವ ಹೊಸೂರ, ರೇಣುಕಾ ರೆಡ್ಡೇರ, ರೆಹೆನಾಬಾನು ಮಕಾನದಾರ, ಅರುಣಕುಮಾರ ಪಾಟೀಲ, ರೂಪಾ ಭಜಂತ್ರಿ, ಫಕೀರಪ್ಪ ವಡ್ಡರ, ಮಂಜುಳಾ ಹುರಳಿ, ಮಂಜಪ್ಪ ಬನವಾಸಿ, ವೀರಭದ್ರಗೌಡ ಪಾಟೀಲ, ಪಾರ್ವತವ್ವ ಚಿಕ್ಕಾಂಶಿ ಇತರರಿದ್ದರು. ಸಿದ್ದು ಪಾಟೀಲ ನಿರ್ವಹಿಸಿದರು.

ಹಾವೇರಿ ಜಿಲ್ಲೆಯಲ್ಲಿ 510 ಕೋಟಿ ರೂಪಾಯಿ, ಗದಗ ಜಿಲ್ಲೆಯಲ್ಲಿ 300 ಕೋಟಿ ರೂಪಾಯಿ ವೆಚ್ಚದಲ್ಲಿ ಜಲ ಜೀವನ್ ಮಿಷನ್ ಅಡಿ ಪ್ರತಿ ಮನೆಗೂ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ.| ಶಿವಕುಮಾರ ಉದಾಸಿ, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net