ಆಂಬುಲೆನ್ಸ್ ಬಡಿದು ಪಾದಚಾರಿ ಸಾವು

10KWR-Sadanand kamat
Published on

ಅಂಕೋಲಾ:  ಹೆದ್ದಾರಿ ದಾಟುವಾಗ ಆಂಬುಲೆನ್ಸ್ ಬಡಿದು ಗಾಯಗೊಂಡ ಪಾದಚಾರಿ ಮೃತಪಟ್ಟ ಘಟನೆ ಶುಕ್ರವಾರ ತಾಲೂಕಿನ ಅವರ್ಸಾ ಬಳಿ ನಡೆದಿದೆ.

ಅಂಕೋಲಾ ಪಟ್ಟಣದ ಮಠಾಕೇರಿಯ  ನಿವಾಸಿ ಸದಾನಂದ  ಕಾಮತ್ (55) ಮೃತರು.

ರಾಷ್ಟ್ರೀಯ ಹೆದ್ದಾರಿ 66 ದಾಟುವಾಗ ಅಪಘಾತ ಸಂಭವಿಸಿತ್ತು. ಅದೇ ಆಂಬುಲೆನ್ಸ್ ನಲ್ಲಿ ಅವರನ್ನು ಕಾರವಾರ ಕ್ರಿಮ್ಸ್ ಗೆ ದಾಖಲಿಸಲಾಗಿತ್ತು. ಆದರೆ,‌ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ. ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net