

ಸುಬ್ರಹ್ಮಣ್ಯ: ಸಚಿನ್ ಕ್ರೀಡಾ ಸಂ ಹರಿಹರ ಪಲ್ಲತ್ತಡ್ಕ ಹಾಗೂ ದಾನಿಗಳ ಸಹಕಾರದಿಂದ ನೂತನವಾಗಿ ಖರೀದಿಸಿದ ಆಂಬುಲೆನ್ಸ್‌ನ ಲೋಕಾರ್ಪಣೆ ಕಾರ್ಯಕ್ರಮ ಗುರುವಾರ ಹರಿಹರ ಪಳ್ಳತಡ್ಕದಲ್ಲಿ ನಡೆಯಿತು.
ಹರಿಹರೇಶ್ವರ ದೇವಸ್ಥಾನಕ್ಕೆ ತಂದು ಅಲ್ಲಿ ಪೂಜೆ ನೆರವೇರಿಸಿ, ಬಳಿಕ ಎಲ್ಲಪಡ್ಕದ ಗುಳಿಗ ರಾಜನ ಕಟ್ಟೆ ಬಳಿ ತೆಂಗಿನಕಾಯಿ ಒಡೆಲಾಯಿತು. ನಂತರ ಹರಿಹರ ಪಲ್ಲತಡ್ಕದ ಪೇಟೆಯಲ್ಲಿನ ಸಭಾಂಗಣದಲ್ಲಿ ವೈದ್ಯ ಡಾ.ಚಂದ್ರಶೇಖರ ಕಿರಿಭಾಗ ಆಂಬ್ಯುಲೆನ್ಸ್ ಲೋಕಾರ್ಪಣೆಗೊಳಿಸಿದರು.
ಸ್ಥಳೀಯರಾದ ಡಾ.ಗಿರೀಶ್ ಉರಿಮಜಲು, ಕೊಲ್ಲಮೊಗ್ರು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕುಲದೀಪ, ಹರಿಹರ ಪಳ್ಳತಡ್ಕ ಗ್ರಾ.ಪಂ. ಅಧ್ಯಕ್ಷ ವಿಜಯ ಅಂಣ, ಸಚಿನ್ ಕ್ರೀಡಾ ಸಂದ ಅಧ್ಯಕ್ಷ ಜಗದೀಶ್ ವಾಡ್ಯಪ್ಪನ ಮನೆ ಇದ್ದರು. ನಿತ್ಯಾನಂದ ಭೀಮಗುಳಿ ಸ್ವಾಗತಿಸಿದರು. ಮನೀಶ್ ಪಲ್ಲತಡ್ಕ ವಂದಿಸಿದರು.
ಆಂಬುಲೆನ್ಸ್ ಸಂಪರ್ಕ ಸಂಖ್ಯೆ 93530 74152, 74838 27962.