13 ಆಂಬ್ಯುಲೆನ್ಸ್ ಖರೀದಿಗೆ ಅನುಮೋದನೆ

Ambulance
Published on

ಬೆಂಗಳೂರು:  ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗಳನ್ನು ರಾಷ್ಟ್ರೀಯ ಅಪಘಾತ ಮತ್ತು ಸುಟ್ಟ ಗಾಯಗಳ ಕಾರ್ಯಕ್ರಮದಡಿ ಬಲಗೊಳಿಸಲು 13 ಆಂಬ್ಯುಲೆನ್ಸ್ ಹಾಗೂ ಅಗತ್ಯ ವೈದ್ಯಕೀಯ ಉಪಕರಣ ಖರೀದಿಗೆ 10 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡಿ ಸರ್ಕಾರ ಆದೇಶ ಹೊರಿಡಿಸಿದೆ.

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗಳಿಗೆ ತಲಾ ಒಂದು ಅಡ್ವಾನ್ಸಡ್ ಲ್ೈ ಸೋರ್ಟ್ ಆಂಬ್ಯುಲೆನ್ಸ್ ಹಾಗೂ ಮೈಸೂರು ಜಿಲ್ಲೆಯ 7 ತಾಲ್ಲೂಕು ಆಸ್ಪತ್ರೆ ಮತ್ತು ಚಾಮರಾಜನಗರ ಜಿಲ್ಲೆಯ 4 ತಾಲ್ಲೂಕು ಆಸ್ಪತ್ರೆಗಳ ಉಪಯೋಗಕ್ಕಾಗಿ 11 ಬೇಸಿಕ್ ಲ್ೈ ಸಪೋರ್ಟ್ ಆಂಬ್ಯುಲೆನ್ಸ್ ಸೇರಿ ಒಟ್ಟು 13 ಆಂಬ್ಯುಲೆನ್ಸ್ ಖರೀದಿಯ ಜತೆಗೆ ಈ ಆಸ್ಪತ್ರೆಗಳಿಗೆ ಆಗತ್ಯ ವೈದ್ಯಕೀಯ ಉಪಕರಣಗಳ ಖರೀದಿಗೂ ಅನುಮತಿ ನೀಡಿರುವುದಾಗಿ ಆರೋಗ್ಯ ಇಲಾಖೆ ಅಧೀನ ಕಾರ್ಯದರ್ಶಿ ಪವಿತ್ರ ಆದೇಶದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net