ಅಂಬಿಗರ ಚೌಡಯ್ಯ, ಹರಿಹರ ಜಯಂತಿ ಆಚರಣೆ; ವಚನಜ್ಯೋತಿ ಬಳಗದಿಂದ ಆಯೋಜನೆ

Vachana
Published on

ಬೆಂಗಳೂರು: ಕನ್ನಡ ಕಾವ್ಯಲೋಕದ ಪಥವನ್ನೇ ಬದಲಿಸಿದ ಮಹಾಕವಿ ಹರಿಹರ ನಿಜವಾದ ಬಂಡಾಯಗಾರರಾಗಿದ್ದಾರೆ ಎಂದು ಸಾಹಿತಿ ಎಸ್​.ಪಿನಾಕಪಾಣಿ ಹೇಳಿದ್ದಾರೆ.

ವಚನಜ್ಯೋತಿ ಬಳಗ ಕಲ್ಯಾಣ ಪಟ್ಟಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಮತ್ತು ಹರಿಹರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ತನ್ನ ಹೆಸರನ್ನೇ ಅಂಕಿತವಾಗಿಟ್ಟುಕೊಂಡ ಅಂಬಿಗರ ಚೌಡಯ್ಯ, ಸಮಾಜದಲ್ಲಿದ್ದ ಅನಾಚಾರ, ಡಂಭಾಚಾರಗಳನ್ನು ನಿರ್ಭೀತಿಯಿಂದ ಟೀಕಿಸಿ, ಕ್ರಾಂತಿಕಾರಿ ಎಂದು ಹೆಸರಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಚನ ಕಲಿಕಾ ವಿದ್ಯಾರ್ಥಿಗಳು ಅಂಬಿಗರ ಚೌಡಯ್ಯನವರ ವಚನಗಳನ್ನು ಹಾಡಿದರು. ವಚನಜ್ಯೋತಿ ನಾಗರಬಾವಿ ಬಳಗದ ಖಜಾಂಚಿ ನಂದಕುಮಾರ್​, ವಿದ್ಯಾಭಾರತಿ ಶಾಲೆಯ ಪ್ರಾಚಾಯೆರ್ ಭ್ರಮರಾಂಭ, ಗಾಯಕಿ ಸರ್ವಾಣಿ, ರೂಪಾ ಪ್ರಸಾದ್​, ಕಾತ್ಯಾಯಿನಿ ಸುಭಾಷ್​ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net