ಅಂಬೇಡ್ಕರ್ ವಸತಿಶಾಲೆ ಕೊಠಡಿ ಉದ್ಘಾಟನೆ

ಅಂಬೇಡ್ಕರ್ ವಸತಿಶಾಲೆ ಕೊಠಡಿ ಉದ್ಘಾಟನೆ
Published on

ತಿ.ನರಸೀಪುರ: ತಾಲೂಕಿನ ದೊಡ್ಡೆಬ್ಬಾಗಿಲು ಗ್ರಾಮದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಪ್ರೌಢಶಾಲೆಯಲ್ಲಿ ಭಾನುವಾರ ಸಂಸದರು ಹಾಗೂ ಶಾಸಕರ ಅನುದಾನದಲ್ಲಿ ನಿರ್ಮಾಣವಾಗಿರುವ ನಾಲ್ಕು ಕೊಠಡಿಗಳ ನೂತನ ಕಟ್ಟಡವನ್ನು ಉದ್ಘಾಟಿಸಲಾಯಿತು.

ಸೋಸಲೆ ಹೋಬಳಿಯ ಗಡಿ ಗ್ರಾಮವಾದ ದೊಡ್ಡೆಬ್ಬಾಗಿಲು ಗ್ರಾಮದಲ್ಲಿ ಗೌತಮ ವಿದ್ಯಾಸಂಸ್ಥೆಯಿಂದ ನಡೆಸುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಪ್ರೌಢಶಾಲೆಗೆ ಹೆಚ್ಚುವರಿ ಕೊಠಡಿಗಳನ್ನು ನಿರ್ಮಾಣ ಮಾಡಲು ಸಂಸದರಾಗಿದ್ದ ದಿವಂಗತ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ಶಾಸಕರಾಗಿದ್ದ ಎಂ.ಅಶ್ವಿನ್‌ಕುಮಾರ್ ಅವರು ತಮ್ಮ ಅಕಾರವಯಲ್ಲಿ ಅನುದಾನ ನೀಡಿದ್ದರು. ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಸಾಂಪ್ರದಾಯಿಕವಾಗಿ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು.

ಗೌತಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಶಶಿಕಲಾ ಎಸ್.ನಾಗರಾಜು ಮಾತನಾಡಿ, ಹಲವು ದಶಕಗಳಿಂದ ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಸೇವೆಯನ್ನು ಗಮನಿಸಿದ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ಎಂ.ಅಶ್ವಿನ್ ಕುಮಾರ್ ಅವರು ಪ್ರದೇಶ ಅಭಿವೃದ್ಧಿ ಅನುದಾನದಲ್ಲಿ ನೆರವು ನೀಡಿದ್ದರಿಂದ ಶಾಲೆಗೆ ಸುಸಜ್ಜಿತವಾದ ನಾಲ್ಕು ಕೊಠಡಿಗಳು ಲಭ್ಯವಾಗಿರುವುದು ಹೆಮ್ಮೆಯ ವಿಷಯವಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಡೊನೇಷನ್ ಹೊರೆ ಇಲ್ಲದೆ ಶಿಕ್ಷಣವನ್ನು ನೀಡುತ್ತಿದ್ದೇವೆ ಎಂದು ಹೇಳಿದರು.

ಉಪಾಧ್ಯಕ್ಷ ಎಸ್.ನಾಗರಾಜು, ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ದಾರ್ಥ, ಖಜಾಂಚಿ ಕೆ.ಪುಟ್ಟಲಿಂಗಯ್ಯ, ನಿರ್ದೇಶಕ ಕೆ.ವೀರಯ್ಯ, ಚೇರ್ಮನ್ ಮಹದೇವಯ್ಯ, ಎಸ್.ಗಿರಿಯಯ್ಯ, ಎಂ.ಎನ್.ನಂಜುಂಡಸ್ವಾಮಿ, ಎನ್.ಲಿಂಗಪ್ಪಾಜಿ, ಮಹದೇವಯ್ಯ ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕ, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net