ಅಂಬೇಡ್ಕರ್ ವಸತಿ ಶಾಲೆಗೆ ಶೇಕಡ ನೂರು ಫಲಿತಾಂಶ

ಅಂಬೇಡ್ಕರ್ ವಸತಿ ಶಾಲೆಗೆ ಶೇಕಡ ನೂರು ಫಲಿತಾಂಶ
Published on

ನಾಪೋಕ್ಲು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗೆ ಶೇಕಡ 100 ಫಲಿತಾಂಶ ದೊರೆತಿದೆ.

ಪರೀಕ್ಷೆಯಲ್ಲಿ 37 ವಿದ್ಯಾರ್ಥಿಗಳು ಭಾಗವಹಿಸಿ ಎಲ್ಲರೂ ಉತ್ತೀರ್ಣರಾಗಿದ್ದಾರೆ. ಎ.ಟಿ.ಸಂತೋಷ್ 625ಕ್ಕೆ 577ಅಂಕಗಳಿಸಿ ಶಾಲೆಗೆ ಪ್ರಥಮ, ವಿಕಾಸ್ ಕುರುಬರ್ 564 ಅಂಕ ಗಳಿಸಿ ದ್ವಿತೀಯ, ಪಿ.ಜೆ.ಯಶ್ವಂತ್ 561ಅಂಕಗಳಿಸಿ ತೃತೀಯ ಸ್ಥಾನಗಳಿಸಿದ್ದಾರೆ. ಸತತವಾಗಿ ನಾಲ್ಕನೇ ಬಾರಿಗೆ ಶೇಕಡ ನೂರು ಫಲಿತಾಂಶ ದೊರೆತಿದೆ ಎಂದು ಶಾಲೆಯ ಪ್ರಾಂಶುಪಾಲರಾದ ಕೆ.ಡಿ.ನೀತಾ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net