

ಸರಗೂರು: ತಾಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಯ್ಯಂಬಳ್ಳಿಹುಂಡಿ ಗ್ರಾಮದಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳ್ಳಿ ರಥದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಇಟ್ಟು ಮಂಗಳವಾದ್ಯದ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಬಿದರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಬಿ ಶಿವಣ್ಣ ಮಾತನಾಡಿ, ಅಂಬೇಡ್ಕರ್ ಅವರ ಜನ್ಮದಿನವನ್ನು ಸಮಾನತೆಯ ದಿನ ಎಂದು ಕರೆಯಲಾಗುತ್ತದೆ. ಅಸ್ಪಶ್ಯರ ವಿರುದ್ಧದ ತಾರತಮ್ಯವನ್ನು ತೊಡೆದು ಹಾಕಲು ಮತ್ತು ಮಹಿಳೆಯರು ಹಾಗೂ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಲು ಅಂಬೇಡ್ಕರ್ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂದು ಹೇಳಿದರು.
ಅಂಬೇಡ್ಕರ್ ಅವರು ಕಾನೂನಿನ ದೃಷ್ಟಿಯಲ್ಲಿ ಎಲ್ಲರು ಸಮಾನರು, ಎಲ್ಲರಿಗೂ ಸಮಾನ ನ್ಯಾಯ ದೊರಕಬೇಕು ಎಂಬುದನ್ನು ತಮ್ಮ ಜೀವಮಾನವಿಡಿ ಪ್ರತಿಪಾದಿಸಿದರು ಎಂದು ಹೇಳಿದರು.
ಗ್ರಾಮದ ಯಜಮಾನ ನಾಗೇಶ್, ಚಿಕ್ಕ ಯಜಮಾನ ವೆಂಕಟೇಶ, ಶಿವಣ್ಣ, ಶೊಂಭಯ್ಯ, ಆನಂದ, ಪುಟ್ಟರಾಜು, ಸ್ವಾಮಿ, ಮಾಜಿ ಗ್ರಾ.ಪಂ.ಸದಸ್ಯ ಸ್ವಾಮಿ, ಮಲ್ಲೇಶ, ದೊಡ್ಡಯ್ಯ, ಮಲ್ಲೇಶ, ಮಹೇಶ, ರಾಜು, ಜವರದಾಸಯ್ಯ, ರಾಜಯ್ಯ, ದೊಡ್ಡಯ್ಯ, ಚಿಕ್ಕದೊಡ್ಡಯ್ಯ, ಜೈಭೀಮ್ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.