

ಬೆಳ್ತಂಗಡಿ: ಡಾ.ಬಿ.ಆರ್.ಅಂಬೇಡ್ಕರ್ ವಿಶ್ವ ಕಂಡ ಧೀಮಂತ ವ್ಯಕ್ತಿಗಳಲ್ಲಿ ಅಗ್ರಗಣ್ಯರು. ಅವರ ವಿಚಾರಧಾರೆಗಳಿಗೆ, ಜ್ಞಾನ ಭಂಡಾರಕ್ಕೆ ವಿಶ್ವಾದ್ಯಂತ ಅನುಯಾಯಿಗಳನ್ನು ಹೊಂದಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದರು.
ಪುದುವೆಟ್ಟು ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಜಿಲ್ಲಾ ಪಂಚಾಯಿತಿ ವಾಜಿ ಸದಸ್ಯೆ ನಮಿತಾ ಪೂಜಾರಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಶ್ರೀಧರ್ ಕಳಂಜ, ಇಂಟೆಕ್ ಗ್ರಾಮೀಣ ಅಧ್ಯಕ್ಷ ಅಶ್ರಫ್ ನೆರಿಯ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿ ಕಾರ್ಯದರ್ಶಿ ರಜತ್ ಗೌಡ, ಬೊಮ್ಮಣ್ಣ ಗೌಡ ಪುದುವೆಟ್ಟು, ಅಬ್ದುಲ್ ಗೂರ್ ಪುದುವೆಟ್ಟು, ಸಂತೋಷ್ ಕೆ.ಸಿ.ಪುದುವೆಟ್ಟು, ರೊಯ್ ಪುದುವೆಟ್ಟು, ಡಯಾನಾ ಪುದುವೆಟ್ಟು ಮೊದಲಾದವರಿದ್ದರು.