

ಬೈಲಕುಪ್ಪೆ: ಬೈಲಕುಪ್ಪೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿ ಆಚರಿಸಲಾಯಿತು.
ಈ ಸಂದರ್ಭ ಆಡಳಿತ ಮಂಡಳಿ ಸಭೆಯ ತೀರ್ಮಾನದಂತೆ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಧನ ಸಹಾಯ ನೀಡಲಾಯಿತು.
ಪಿಡಿಒ ಬೋರೆಗೌಡ, ಗ್ರಾ.ಪಂ.ಸದಸ್ಯ ಮುತ್ತುರಾಜ್, ರಘು, ಸಣ್ಣಜವರಿಯ, ನಿಶಾರ್ ಅಹ್ಮದ್, ದಹೂದ್, ಪ್ರಕಾಶ್, ಕಾರ್ಯದರ್ಶಿ ಕುಮಾರ್, ರಾಮಕೃಷ್ಣ, ಭೈರವ, ಕೃಷ್ಣ ಇತರರು ಇದ್ದರು
ಅವರ್ತಿ: ಅವರ್ತಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ 134 ನೇ ಜಯಂತಿ ಆಚರಿಸಲಾಯಿತು. ಉಪಾಧ್ಯಕ್ಷೆ ಸುಶೀಲಮ್ಮ, ಪಿಡಿಒ ಅಭಿ ಮೊಹಮ್ಮದ್, ಸದಸ್ಯ ಮಂಜು, ಮಾದೇಶ್, ಯೋಗ ನಾಯಕ ಇತರರು ಇದ್ದರು.
ಹಳೆಯೂರು: ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು, ಪುಷ್ಪಾರ್ಚನೆ ಮಾಡಿ, ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಗ್ರಾಮದ ಮುಖಂಡ ಸಣ್ಣ ರಾಜು, ಪ್ರಭಾಕರ, ಸೀನಾ, ಅಣ್ಣಾಮಲೈ, ಈಶ್ವರ ಇತರರು ಇದ್ದರು.