ಜೈ ಭೀಮ್ ಹೋರಾಟ ಸಮಿತಿಯಿಂದ ಅಂಬೇಡ್ಕರ್ ಜಯಂತಿ

ಜೈ ಭೀಮ್ ಹೋರಾಟ ಸಮಿತಿಯಿಂದ ಅಂಬೇಡ್ಕರ್ ಜಯಂತಿ
Published on

ತಿ.ನರಸೀಪುರ: ತಾಲೂಕಿನ ಬನ್ನೂರು ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದಲ್ಲಿ ಜೈ ಭೀಮ್ ಹೋರಾಟ ಸಮಿತಿಯಿಂದ ಸೋಮವಾರ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಪ್ರಮುಖರು ಬಾಬಾ ಸಾಹೇಬರ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡಿ, ದೀಪ ಬೆಳಗುವ ಮೂಲಕ ಗೌರವ ಸಲ್ಲಿಸಿದರು.

ಈ ಸಂದರ್ಭ ಪುರಸಭೆ ನಾಮನಿರ್ದೇಶನ ಸದಸ್ಯ ಆರ್.ಶಿವಣ್ಣ, ವಿಎಸ್‌ಎಸ್‌ಎನ್ ನಿರ್ದೇಶಕ ಹನುಮನಾಳು ಚನ್ನಮಲ್ಲು, ಯಾಚೇನಹಳ್ಳಿ ಶಿವರಾಮು ಅವರನ್ನು ಸನ್ಮಾನಿಸಲಾಯಿತು.

ಸಮಿತಿಯ ಅಧ್ಯಕ್ಷ ಯಾಚೇನಹಳ್ಳಿ ರಾಘವೇಂದ್ರ, ಗೌರವಾಧ್ಯಕ್ಷ ಬೀಡನಹಳ್ಳ ಮಹದೇವು, ಕಾರ್ಯದರ್ಶಿ ಬಸವನಹಳ್ಳಿ ಮಹದೇವು, ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ಮಹೇಶ್, ಅಂಕನಹಳ್ಳಿ ಕರಿಪುಟ್ಟಯ್ಯ, ಬೆಟ್ಟಹಳ್ಳಿ ಕೆಂಪರಾಜು, ಬನ್ನೂರು ಮನು, ಮೇಣಸಿಕ್ಯಾತನಹಳ್ಳಿ ಪುಟ್ಟಸ್ವಾಮಿ, ನಾಗೇಂದ್ರ, ಮಾದಿಗಹಳ್ಳಿ ಮುದ್ದುರಾಜು, ರಾಮಣ್ಣ, ಚಿನ್ನಸ್ವಾಮಿ, ಕೃಷ್ಣ, ಅರವಟ್ಟಿಗೆಕೊಪ್ಪಲು ನಾರಾಯಣ, ಬೀಡನಹಳ್ಳಿ ಮಂಜು, ಮಹೇಶ್, ಚಾಮನಹಳ್ಳಿ ಶ್ರೀನಿವಾಸ, ಮಾರಗೌಡನಹಳ್ಳಿ ಮಂಜು, ದೊಡ್ಡಮುಲಗೂಡು ಅಂದಾನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net