ಸಮಾಜದ ಯುವಕರಿಗೆ ಅಂಬೇಡ್ಕರ್ ಸ್ಪೂರ್ತಿ

Kudligi ambedkar jayanti
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಶುಕ್ರವಾರ ತಾಲೂಕು ಆಡಳಿತ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ತಹಸೀಲ್ದಾರ್ ಟಿ.ಜಗದೀಶ್ ಪೂಜೆ ಸಲ್ಲಿಸಿದರು. ತಾಪಂ ಇಒ ವೈ.ರವಿಕುಮಾರ್, ಸಿಪಿಐ ವಸಂತ ಅಸೋದೆ, ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗುಣಸಾಗರ ಕೃಷ್ಣಪ್ಪ, ಪ್ರಮುಖರಾದ ಟಿ.ಉಮೇಶ್, ರಾಮಪ್ಪ, ಎಸ್.ದುರುಗೇಶ್, ಡಿ.ಎಚ್.ದುರುಗೇಶ್ ಇದ್ದರು.
Published on

ಕೂಡ್ಲಿಗಿ ಬಿ. ಆರ್.ಅಂಬೇಡ್ಕರ್ ಭಾರತದ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿಯಾಗಿದ್ದು, ಸಮಾಜದ ಯುವಕರಿಗೆ ಅಂಬೇಡ್ಕರ್ ಸ್ಪೂರ್ತಿಯಾಗಿದ್ದಾರೆ ಎಂದು ತಹಸೀಲ್ದಾರ್ ಟಿ.ಜಗದೀಶ್ ಹೇಳಿದರು.


ಪಟ್ಟಣದ ತಹಸಿಲ್ ಕಚೇರಿಯಲ್ಲಿ ಶುಕ್ರವಾರ ತಾಲೂಕು ಆಡಳಿತ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತಾನಾಡಿದರು.


ಅಂಬೇಡ್ಕರ್ ಬದುಕು ಎಲ್ಲರಿಗೂ ಸ್ಫೂರ್ತಿಯಾಗಿದ್ದು, ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ ಎನಿಸಿಕೊಂಡಿದ್ದಾರೆ.ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿದೀಪವಾಗಿದೆ. ಅಂಬೇಡ್ಕರ್ ಚಿಂತೆನೆಗಳು ಇಂದಿಗೂ ಯುವಜನೆತೆಗೆ ಸ್ಫೂರ್ತಿ ನೀಡುತ್ತಿವೆ. ಅವರ ಜೀವನ, ತತ್ವ ಸಿದ್ದಾಂತಗಳು ಯುವಕರಿಗೆ ಅಗತ್ಯವಾಗಿದೆ ಎಂದರು.


ಅಂಬೇಡ್ಕರ್ ವೃತ್ತಿಪರ ಅರ್ಥಶಾಸ್ರ್ತಜ್ಞರಾಗಿದ್ದು,ಭಾರತದ ಹಣಕಾಸು ಆಯೋಗವನ್ನು ಸ್ಥಾಪಿಸಿದರು. ಭಾರತೀಯ ರಿಸರ್ವ್ ಬ್ಯಾಂಕ್ ಅಂಬೇಡ್ಕರ್ ರೂಪಿಸಿದ ಮಾರ್ಗಸೂಚಿಗಳು ಮತ್ತು ಆಲೋಚನೆಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಭಾರತದಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಪ್ರಮುಖ ಕಾರಣಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರು ಎಂದು ಬಣ್ಣಿಸಿದರು.


ತಾಪಂ ಇಒ ವೈ.ರವಿಕುಮಾರ್,ಪ್ರಮುಖರಾದ ಟಿ.ಉಮೇಶ್, ರಾಮಪ್ಪ, ಎಸ್.ದುರುಗೇಶ್, ಡಿ.ಎಚ್.ದುರುಗೇಶ್, ಹೆಗ್ಡಾಳ ಮಹೇಶ, ಸಾಸಲವಾಡ ಶಿವಣ್ಣ, ಕಂದಗಲ್ಲ ಪರುಶುರಾಮ,ಗಂಗಣ್ಣ,ಬಸಪ್ಪ,ಮಹೇಶ,ಸಾಲುಮನಿ ರಾಘವೇಂದ್ರ, ಶಿಡ್ಲಪ್ಪ, ಮರಿಸ್ವಾಮಿ,ಕೆ.ಮೂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net