ವಡಗೇರಾದಲ್ಲಿ ಅಂಬೇಡ್ಕರ್ ಜಯಂತಿ

1404wdg02
Published on

ವಡಗೇರಾ: ವಡಗೇರಾದ ಸರ್ಕಾರಿ ಆಸ್ಪತ್ರೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿ ಪ್ರಯುಕ್ತ ಅಂಬೇಡ್ಕರ್ ಸ್ವಾಭಿಮಾನ ಸೇನೆ ತಾಲೂಕು ಅಧ್ಯಕ್ಷ ಗುರುನಾಥ ನಾಟೇಕರ್ ನೇತೃತ್ವದಲ್ಲಿ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು.

ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕಾಂಗ್ರೆಸ್ ಯುವ ಮುಖಂಡರಾದ ಬಸವರಾಜ ಸೊನ್ನದ ಹಾಗೂ ಪ್ರವೀಣ್ ಸಾಹು ಕರಣಿಗಿ ಮಾಲಾರ್ಪಣೆ ಮಾಡಿದರು. ಕರವೇ ಉತ್ತರ ಕನರ್ಾಟಕ ಸಂಚಾಲಕರಾದ ಶರಣು ಎಸ್.ಇಟಗಿ, ಮಹಿಬೂಬ್ ಖುರೇಷಿ ದೀಪ ಹಚ್ಚಿ ಪೂಜೆ ಸಲ್ಲಿಸಿದರು.

ವೈದ್ಯರಾದ ಡಾ.ಜಗನ್ನಾಥ ರಡ್ಡಿ, ಪ್ರಮುಖರಾದ ರಾಯಪ್ಪ ನಾಟೇಕರ್ , ಹೊನ್ನಪ್ಪ ಕಲ್ಲಪ್ಪನೋರ, ರಘುಪತಿ ನಾಟೇಕರ್, ಶರೀಫ್ ಕುರಿ, ಭೀಮಣ್ಣ ಚಿನ್ನಿ, ಅಬ್ದುಲ್ ಚಿಗಾನೂರ, ಪ್ರಭು ಮಾಗನೂರ, ಮಹ್ಮದ್ ಖಾಜಾ ಖುರೇಷಿ, ಮಲ್ಲೇಶ್ ನಾಟೇಕರ್, ಅಶೋಕ್ ಚಿನ್ನಿ, ಮಲ್ಲಪ್ಪ ಕುರಿ, ಅಶೋಕ್ ಮಾಗನೂರ, ದೇವಪ್ಪ ರಾಖಾ, ಚನ್ನಬಸ್ಸಪ್ಪ ಗಾಣದಾಳ,ಯಲ್ಲಪ್ಪ ನಾಟೇಕರ್, ಶರಣು ನಾಟೇಕರ್, ಮರೆಪ್ಪ ಉಳ್ಳೆಸೂಗುರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net