

ತುಮಕೂರು: ಲೋಕಸಭಾ ವಿಪಕ್ಷ ನಾಯಕ ರಾಹುಲ್ಗಾಂಧಿ ಹೇಳಿದಂತೆ ಕಾಂಗ್ರೆಸ್ ಪಕ್ಷದೊಳಗಿರುವ ಆರ್ಎಸ್ಎಸ್ ಪರಿಚಾರಕರನ್ನು ತುಮಕೂರು ಜಿಲ್ಲೆಯೂ ಸೇರಿದಂತೆ ದೇಶದಾದ್ಯಂತ ಪಕ್ಷದಿಂದ ಹೊರ ಹಾಕಬೇಕಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ಅಂಬೇಡ್ಕರ್ಅವರ 134ನೇ ಜನ್ಮಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವಸಂಸ್ಥೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನವನ್ನು ಜ್ಞಾನದ ದಿನವನ್ನಾಗಿ ಆಚರಿಸುತ್ತಿದೆ.ಆದರೆ, ಬಿಜೆಪಿ ಕ್ಷುಲ್ಲಕ ರಾಜಕಾರಣಕ್ಕೆ ಅಂಬೇಡ್ಕರ್ ಹೆಸರು ಎಳೆದು ತರುವ ಮೂಲಕ ಅವರ ಹೆಸರಿಗೆ ಮಸಿ ಬಳಿಯಲು ಹೊರಟಿದೆ ಎಂದರು.
ಪ್ರತಿಮೆಗಳ ಸ್ಥಾಪನೆ ಒಂದು ಒಳ್ಳೆಯ ಕೆಲಸವಾದರೂ, ಅದಕ್ಕಿಂತ ತತ್ವ ಸಿದ್ದಾಂತಗಳು, ವಿಚಾರಧಾರೆಗಳನ್ನು ಜನರ ನಡುವೆ ತೆಗೆದುಕೊಂಡು ಹೋಗಿ, ಬಹುತ್ವದ ಭಾರತದ ಬಗ್ಗೆ ಅಂಬೇಡ್ಕರ್ ಅವರಿಗಿದ್ದ ಪರಿಕಲ್ಪನೆಯನ್ನು ತಿಳಿಸುವ ಮೂಲಕ ಜನರನ್ನು ಎಚ್ಚರಗೊಳಿಸುವ ಕೆಲಸ ಆಗಬೇಕಿದೆ. ಬಾಬಾ ಸಾಹೇಬರುತಮ್ಮ ಹೋರಾಟಗಳ ಮೂಲಕ ಇಡೀ ಶೋಷಿತ ಸಮುದಾಯಕ್ಕೆ ಧ್ವನಿಯಾದರೆ, ಸಂವಿಧಾನದ ಮೂಲಕ ಭಾರತದಎಲ್ಲಾ ವರ್ಗಗಳಿಗೂ ಧ್ವನಿ ನೀಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಮಾಜಿ ಶಾಸಕ ಎಸ್.ಷಫೀ ಅಹ್ಮದ್, ಮಾಜಿ ಎಂಎಲ್ಸಿ ವೇಣುಗೋಪಾಲ್, ಮಹಿಳಾ ಘಟಕದ ಅಧ್ಯಕ್ಷೆ ಗೀತಾರಾಜಣ್ಣ, ಎಸ್.ಟಿ.ಶ್ರೀನಿವಾಸ್, ರೇವಣ್ಣಸಿದ್ದಯ್ಯ, ಬಿ.ಜಿ.ಲಿಂಗರಾಜು, ಆರ್.ರಾಮಕೃಷ್ಣ, ವಾಲೆಚಂದ್ರಯ್ಯ,ನರಸೀಯಪ್ಪ, ವೀರೇಶಕುಮಾರ್, ಷಣ್ಮುಖಪ್ಪ, ಎಚ್.ಸಿ.ಹನುಮಂತಯ್ಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮಹೇಶ್, ಫಯಾಜ್, ಮುಖಂಡರಾದ ನಯಾಜ್,ನಾಗಮಣಿ ಮತ್ತಿತರರು ಉಪಸ್ಥಿತರಿದ್ದರು.