ಶನೈಶ್ಚರಸ್ವಾಮಿ ದೇವಸ್ಥಾನದಲ್ಲಿ ಅಮಾವಾಸ್ಯೆ ಪೂಜೆ

12-ark-1
ಅರಕಲಗೂಡು ಶ್ರೀ ಶನೈಶ್ಚರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ ಪ್ರಯುಕ್ತ ಮಂಗಳವಾರ ಹೋಮ ಹವನ ನಡೆಯಿತು.
Published on

ಅರಕಲಗೂಡು: ಪಟ್ಟಣದ ಶ್ರೀ ಶನೈಶ್ಚರಸ್ವಾಮಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವದ ಅಂಗವಾಗಿ ಮಂಗಳವಾರ ಅಮಾವಾಸ್ಯೆ ಪೂಜಾ ಕೈಂಕರ್ಯಗಳು ನಡೆದವು.

ಬೆಳಗ್ಗೆ 5 ಗಂಟೆಗೆ ಸುಪ್ರಭಾತ ಸೇವೆ, ದೀಪಾರಾಧನೆ, 6 ಗಂಟೆಗೆ ರಾಮನಾಥಪುರ ರಸ್ತೆಯಲ್ಲಿರುವ ಚಿಲುಮೆ ಮಠದಲ್ಲಿ ಗಂಗಾಪೂಜೆ, ಸ್ವಾಮಿಯ ಆಹ್ವಾಹನೆ ನಂತರ ಬೆಳ್ಳಿ ಪಲ್ಲಕ್ಕಿ ಉತ್ಸವ, ವೀರಗಾಸೆ ಕುಣಿತದೊಂದಿಗೆ ಪ್ರಮುಖ ರಾಜಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ 108 ಕಳಸ ಉತ್ಸವ, ಗಣಪತಿ ಹೋಮ, ನವಗ್ರಹ ಹೋಮ, ಶ್ರೀ ಶನೈಶ್ಚರಸ್ವಾಮಿ ಅವರ ಪ್ರಧಾನಹೋಮ, ರುದ್ರಹೋಮ, ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ, ತೀರ್ಥಪ್ರಸಾದ ಹಾಗೂ ಅನ್ನದಾನ ಏರ್ಪಡಿಸಲಾಗಿತ್ತು.

ಪ್ರಧಾನ ಅರ್ಚಕ ವಿಶ್ವೇಶ್ವರ ಶರ್ಮ ಮತ್ತು ಸಂಗಡಿಗರು ಹೋಮ ಮತ್ತು ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಟ್ಟರು. ಬಳಿಕ ಸಂಜೆ 7 ಗಂಟೆಗೆ ಶ್ರೀ ರವಿ ಕೃಪಾಪೋಷಿತ ಕಲಾ ಸಂಘದಿಂದ ರಾಜಾವಿಕ್ರಮ ಅಥವಾ ಕಲಿಪುರುಷ ಮಹಿಮೆ ಪೌರಾಣಿಕ ನಾಟಕ ಪ್ರದರ್ಶನಗೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net