ಕಾರಂಜಿ ಅಂಗಳದಲ್ಲಿ ಸಾಂಸ್ಕೃತಿಕ ಸಂಭ್ರಮ

Amanikere_Cultural
Published on

ತುಮಕೂರು: ಅಮಾನಿಕೆರೆ ಅಂಗಳದಲ್ಲಿನ ಕಾರಂಜಿ ಉದ್ಘಾಟನೆ ಬಳಿಕ ಸ್ವಾತಂತ್ರೊೃೀತ್ಸವ ಅಂಗವಾಗಿ ಮಂಗಳವಾರ ಸಂಜೆ ವಿವಿಧ ಶಾಲೆಗಳ ಮಕ್ಕಳ ಸಾಂಸ್ಕೃತಿಕ ಸಂಭ್ರಮದಲ್ಲಿ ತುಮಕೂರಿಗರು ಮಿಂದೆದ್ದರು.

ಕಾರಂಜಿ ಲೋಕಾರ್ಪಣೆ ಬಳಿಕ ರಾಷ್ಟ್ರಪ್ರೇಮ ಉದ್ದೀಪನಗೊಳಿಸುವ ಮಕ್ಕಳ ನೃತ್ಯಪ್ರದರ್ಶನಕ್ಕೆ ಸಚಿವ ಜಿ.ಪರಮೇಶ್ವರ ಜತೆಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಕೂಡ ಸಾಕ್ಷಿಯಾದರು. ಕಾರಂಜಿ ಅಂಗಳದಲ್ಲಿ ನೆರೆದಿದ್ದ ಜನಸ್ತೋಮವು ಮಕ್ಕಳ ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net