

ಸುಳ್ಯ: ನಗರದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮೂಡುಬಿದಿರೆ ಅಭಿನಯಿಸಿದ, ರಂಗಮಾಂತ್ರಿಕ ಡಾ.ಜೀವನ್ ರಾಂ ಸುಳ್ಯ ನಿರ್ದೇಶನದ ಎರಡು ಪ್ರಸಿದ್ಧ ನಾಟಕಗಳ ಆಳ್ವಾಸ್ ರಂಗೋತ್ಸವಕ್ಕೆ ಶನಿವಾರ ಚಾಲನೆ ದೊರೆಯಿತು. ರಂಗಕಲಾವಿದ, ಚಿತ್ರನಟ ಮಂಡ್ಯ ರಮೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿ ಮಾತನಾಡಿದರು.
ಪಿ.ಬಿ.ಸುಧಾಕರ ರೈ, ಸಿಎ ಗಣೇಶ್ ಭಟ್, ಲತಾ ಮಧುಸೂದನ್, ರವೀಶ್ ಪಡ್ಡಂಬೈಲು, ಕೃಷ್ಣಮೂರ್ತಿ ಉಪಸ್ಥಿತರಿದ್ದರು. ನೀನಾಸಂ ಕಲಾವಿದೆ ಮಮತಾ ಕಲ್ಮಕಾರ್ ಪ್ರಾರ್ಥಿಸಿದರು. ಜೀವನ್ ರಾಮ್ ಸುಳ್ಯ ಸ್ವಾಗತಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ರಂಗಭೂಮಿಯಲ್ಲೇ ವಿಭಿನ್ನ ಪ್ರಯೋಗವೆನಿಸಿದ, ವೈದೇಹಿ ರಚಿಸಿದ ’ನಾಯಿಮರಿ ನಾಟಕ’ ಪ್ರದರ್ಶನಗೊಂಡಿತು. ಸುಳ್ಯದಲ್ಲಿ ನಾಟಕದ 115ನೇ ಪ್ರದರ್ಶನವಾಗಿತ್ತು.