ಶರಣರ ತತ್ವ ಪಾಲನೆಯಿಂದ ಏಳಿಗೆ

Kdb_Sharanara
Published on

ಕಡಬ: ನಮ್ಮ ದೇಶ ಹಲವಾರು ಸಂತರು ಹಾಗೂ ದಾರ್ಶನಿಕರ ಮಾರ್ಗದರ್ಶನದಿಂದಾಗಿ ಸಂಸ್ಕಾರ ಮತ್ತು ಸಂಸ್ಕೃತಿ ಅಳವಡಿಸಿಕೊಂಡಿದೆ. ಸಂತರು, ಶರಣರ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಸಮಾಜದ ಏಳಿಗೆ ಸಾಧ್ಯ ಎಂದು ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷ, ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ಹೇಳಿದರು.

ಗುರುವಾರ ಕಡಬದ ತಾಲೂಕು ಆಡಳಿತ ಸೌಧದಲ್ಲಿ ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಡಿವಾಳ ಮಾಚಿದೇವ ಜಯಂತಿ ಆಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಡಿವಾಳ ಸಮಾಜದ ಮುಂದಾಳು ದಿನಕರ ಪುತ್ರನ್ ಹಳ್ಳಂಗೇರಿ ಮಾತನಾಡಿದರು. ಉಪ ತಹಸೀಲ್ದಾರ್‌ಗಳಾದ ಗೋಪಾಲ್ ಕಲ್ಲುಗುಡ್ಡೆ, ಶಾಹಿದುಲ್ಲಾ ಖಾನ್, ಕಂದಾಯ ನಿರೀಕ್ಷಕ ಪೃಥ್ವಿರಾಜ್, ಕಚೇರಿ ಸಿಬ್ಬಂದಿ, ಮಡಿವಾಳ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net