ಆಳ್ವಾಸ್, ಕಾಂಪ್ ಕ್ಲೌಡ್ ಐಟಿ ಸರ್ವೀಸಸ್ ಒಡಂಬಡಿಕೆ

Mbd_Alvas
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ ಎಜುಕೇಶನ್ ಡೆಸ್ಕ್‌ಟಾಪ್-ಆ್ಯಸ್-ಎ-ಸರ್ವೀಸ್ ಮೂಲಕ ಸಂಸ್ಥೆಯಲ್ಲಿನ ದತ್ತಾಂಶಗಳ ವ್ಯವಸ್ಥಿತ ನಿರ್ವಹಣೆಗಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮಾಹಿತಿ ತಂತ್ರಜ್ಞಾನದ ಮೂಲಸೌಕರ್ಯ ಒದಗಿಸುವ ಕಾಂಪ್ ಕ್ಲೌಡ್ ಐಟಿ ಸರ್ವೀಸಸ್ ಜತೆಗೆ ಮುಂದಿನ 5 ವರ್ಷಗಳಿಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ವ್ಯವಸ್ಥೆ ನೆರವಿನಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ತನ್ನ ಸಂಸ್ಥೆಗಳಲ್ಲಿ ವರ್ಚುವಲ್ ಡೆಸ್ಕ್‌ಟಾಪ್ ಸೌಕರ್ಯವನ್ನು ಪ್ರತಿ ಬೋಧಕ- ಬೋಧಕೇತರ ಸಿಬ್ಬಂದಿಗೆ ಪ್ರತ್ಯೇಕವಾಗಿ ಒದಗಿಸಿದ್ದು, ಈ ಮೂಲಕ ಸ್‌ಟಾವೇರ್ ಡಿೈನ್ಡ್ ನೆಟ್‌ವರ್ಕ್ ಜತೆಗೆ ಕೇಂದ್ರೀಕೃತ ಗಣಕ ನಿರ್ವಹಣಾ ವ್ಯವಸ್ಥೆ ಮಾಡಲಾಗಿದೆ. ಸಾಂಪ್ರದಾಯಿಕ ಡೆಸ್ಕ್‌ಟಾಪ್‌ಗಳಿಗೆ ಹೋಲಿಸಿದರೆ, ಎಜುಕೇಶನ್ ಡೆಸ್ಕ್‌ಟಾಪ್-ಆ್ಯಸ್-ಎ-ಸರ್ವೀಸ್ ವ್ಯವಸ್ಥೆ ಮೂಲಕ ಶೇ.80 ವಿದ್ಯುತ್ ಉಳಿತಾಯವಾಗಲಿದೆ. ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ದೀರ್ಘ ಬಾಳಿಕೆ ಇರದ ವಸ್ತುಗಳ ಮೇಲೆ ಹೂಡಿಕೆ ಮಾಡುವುದರಿಂದ ಮತ್ತಷ್ಟು ದುಂದು ವೆಚ್ಚ ಉಂಟಾಗುತ್ತದೆ. ಮಾಹಿತಿ ತಂತ್ರಜ್ಞಾನದ ಮೂಲಸೌಕರ್ಯಗಳ ಸವಾಲು ಸಮರ್ಪಕವಾಗಿ ನಿರ್ವಹಿಸಲು ಐಟಿ ಸರ್ವೀಸಸ್ ಅಗತ್ಯ. ಎಜುಕೇಶನ್ ಡೆಸ್ಕ್‌ಟಾಪ್-ಆ್ಯಸ್-ಎ-ಸರ್ವೀಸ್ ಮೂಲಕ ಹೆಚ್ಚು ಸುರಕ್ಷಿತ, ವಿಶ್ವಾಸಾರ್ಹ, ಕಡಿಮೆ ವೆಚ್ಚದಲ್ಲಿ ಸಂಪೂರ್ಣ ನಿರ್ವಹಣೆ ಪರಿಹಾರ ಒದಗಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು. ಆಳ್ವಾಸ್ ಸ್ವಾಯತ್ತ ಕಾಲೇಜು ಪ್ರಾಂಶುಪಾಲ ಡಾ.ಕುರಿಯನ್, ಕಾಂಪ್ ಕ್ಲೌಡ್ ಐಟಿ ಸರ್ವೀಸಸ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಪೈ, ಆಳ್ವಾಸ್ ಪರೀಕ್ಷಾಂಗ ವಿಭಾಗ ಕುಲಸಚಿವ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆ ಹಣಕಾಸು ಅಧಿಕಾರಿ ಶಾಂತರಾಮ ಕಾಮತ್, ಕಾಲೇಜು ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ತರಗತಿ ಕೊಠಡಿಗಳನ್ನು ಸ್ಮಾರ್ಟ್ ಲರ್ನಿಂಗ್ ಸ್ಪೇಸ್‌ಗಳಾಗಿ ರೂಪಿಸುವ ಮೂಲಕ ವಿದ್ಯಾರ್ಥಿಗಳಿಗೆ ವೈಯಕ್ತಿಕ ಕಲಿಕೆ ಅನುಭವ ನೀಡಲು ಸಾಧ್ಯ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಂಸ್ಥೆಯಲ್ಲಿ ಈ ತಂತ್ರಜ್ಞಾನದ ಅಳವಡಿಕೆಯಿಂದ ವಿದ್ಯಾರ್ಥಿಗಳನ್ನು ಉದ್ಯಮ ಸಿದ್ಧ ವೃತ್ತಿಪರರನ್ನಾಗಿಸಲು ಸಹಕಾರಿಯಾಗಲಿದೆ. ಡಾ.ಎಂ.ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net