ಬೆಸ್ಕಾಂ ಗ್ರಾಹಕರಿಗೆ ಪರ್ಯಾಯ ವಾಟ್ಸ್​ಆ್ಯಪ್​ ಸಂಖ್ಯೆ; ವಿದ್ಯುತ್​ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ

Bescom
Published on

ಬೆಂಗಳೂರು: ಮಳೆಗಾಲದಲ್ಲಿ ಗ್ರಾಹಕರ ವಿದ್ಯುತ್​ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು 8 ಜಿಲ್ಲೆಗಳ ಗ್ರಾಹಕರಿಗೆ ಪಯಾರ್ಯ ವಾಟ್ಸ್​ಆ್ಯಪ್​ ಸಂಖ್ಯೆಗಳನ್ನು ಬೆಸ್ಕಾಂ ನೀಡಿದೆ. ಈ ಸಂಖ್ಯೆಗಳಿಗೆ ಗ್ರಾಹಕರು ಸಂದೇಶ ಹಾಗೂ ಛಾಯಚಿತ್ರಗಳನ್ನು ತಮ್ಮ ವಿಳಾಸದೊಂದಿಗೆ ಕಳುಹಿಸಿ ವಿದ್ಯುತ್​ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.

ಎಸ್​ಎಂಎಸ್​ ಕಳುಹಿಸಲು ಬೆಂಗಳೂರು ಮಹಾನಗರ ವ್ಯಾಪ್ತಿಯ ಗ್ರಾಹಕರಿಗೆ 12 ಮೊಬೈಲ್​ ಸಂಖ್ಯೆಗಳನ್ನು ಬೆಸ್ಕಾಂ ಒದಗಿಸಿದೆ. ಮೂರ್ನಾಲ್ಕು ದಿನದಿಂದ ಸುರಿದ ಗಾಳಿ&ಮಳೆಗೆ ಹಲವೆಡೆ ವಿದ್ಯುತ್​ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್​ ಮೂಲಸೌಕರ್ಯಗಳು ಹಾನಿಗೊಳಗಾಗಿವೆ. ಹೀಗಾಗಿ ಬೆಸ್ಕಾಂ ಸಹಾಯವಾಣಿಗೆ ವ್ಯಾಪಕ ದೂರು ಬರುತ್ತಿದೆ. ಕರೆಗಳ ಒತ್ತಡದಿಂದ 1912 ಸಂಖ್ಯೆಯ ಸಹಾಯವಾಣಿಗೆ ಸಂಪರ್ಕ ಸಾಧ್ಯವಾಗುತ್ತಿಲ್ಲ. ಹೀಗಾಗಿ ಪರ್ಯಾಯ ಮಾರ್ಗ ಪ್ರಕಟಿಸಿದೆ.

ಎಸ್​ಎಂಎಸ್​ ಕಳುಹಿಸಲು ದೂ: 94808 16108, 94808 16109, 94808 16110, 94808 16111, 94808 16112, 94808 16113, 94808 16114, 94808 16115, 94808 16116, 94808 16117, 94808 16118, 94808 16119 ಮೊಬೈಲ್​ ಸಂಖ್ಯೆಗಳನ್ನು ಬಳಸಬಹುದು.

ಜಿಲ್ಲಾವಾರು ವಾಟ್ಸ್​ಆ್ಯಪ್​ ಸಂಖ್ಯೆಗಳು

ಬೆಂಗಳೂರು ಪೂರ್ವ- 82778 84013, ಬೆಂಗಳೂರು ಪಶ್ಚಿಮ 82778 84012, ಬೆಂಗಳೂರು ಉತ್ತರ 82778 84014, ಬೆಂಗಳೂರು ದಕ್ಷಿಣ 82778 84011, ಕೋಲಾರ 82778 84015, ಚಿಕ್ಕಬಳ್ಳಾಪುರ 82778 84016, ಬೆಂಗಳೂರು ಗ್ರಾಮಾಂತರ 82778 84017, ರಾಮನಗರ 82778 84018, ತುಮಕೂರು 82778 84019, ಚಿತ್ರದುರ್ಗ 82778 84020 ಹಾಗೂ ದಾವಣಗೆರೆ 82778 84021, ಸುರಕ್ಷತೆ ಸಂಬಂಧಿಸಿದ ದೂರುಗಳಿಗೆ 9483191212, 9483191222 ಮತ್ತು ಬೆಸ್ಕಾಂ ಸಾಮಾನ್ಯ ವಾಟ್ಸ್​ಆ್ಯಪ್​ ಸಂಖ್ಯೆ 9449844640.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net