ಆರೋಗ್ಯ ಕಾಳಜಿ ಜತೆಗೆ ತಪಾಸಣೆಯನ್ನೂ ಮಾಡಿಸಿಕೊಳ್ಳಿ

13 GJD- 1
Published on

ಗಜೇಂದ್ರಗಡ: ಆಧುನಿಕ ಯುಗದಲ್ಲಿ ಒತ್ತಡದ ಬದುಕು ಹಾಗೂ ಕುರುಕಲು ತಿಂಡಿ ಸೇವನೆಯಿಂದ ಜನರಲ್ಲಿ ಹೆಚ್ಚು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಜನರು ತಮ್ಮ ಆರೋಗ್ಯದ ಕಾಳಜಿ ಜತೆಗೆ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಗಜೇಂದ್ರಗಡ- ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ ಹೇಳಿದರು.


ಪಟ್ಟಣದ ಮೈಸೂರ ಮಠದಲ್ಲಿ ಗಜೇಂದ್ರಗಡ- ಉಣಚಗೇರಿ ವೀರಶೈವ- ಲಿಂಗಾಯತ ಸಮಾಜದ ಶ್ರಾವಣ ಮಾಸದ ಅಂಗವಾಗಿ ನಡೆಯುತ್ತಿರುವ ಶ್ರೀ ಶರಣಬಸವೇಶ್ವರರ ಪುರಾಣ ಪ್ರವಚನದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.


ಗಜೇಂದ್ರಗಡ- ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ಯುವ ಘಟಕದ ಅಧ್ಯಕ್ಷ ಅಪ್ಪು ಮತ್ತಿಕಟ್ಟಿ ಮಾತನಾಡಿದರು. ಶಿಬಿರದಲ್ಲಿ ಡಾ. ಪ್ರವೀಣ ಅನಗೌಡರ, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಶಾಹಿನ್, ಎಲುಬು ಮತ್ತು ಕೀಲು ತಜ್ಞ ಡಾ. ಶಖೀಲ ಅಹ್ಮದ, ಚಿಕ್ಕ ಮಕ್ಕಳ ತಜ್ಞ ಡಾ. ಅನಿಲಕುಮಾರ ತೋಟದ 200ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಿ, ಔಷಧ ವಿತರಿಸಿದರು.

ಅಮರೇಶ ಗಾಣಿಗೇರ, ಎಸ್.ಎಸ್. ವಾಲಿ, ಶರಣಪ್ಪ ಮೆಣಸಿನಕಾಯಿ, ಬಸವರಾಜ ರೇವಡಿ, ರಾಕೇಶ ಮಾರನಬಸರಿ, ಅಕ್ಷಯ ವನ್ನಾಲ, ಮಹಾಂತೇಶ ಪವಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net