ಸೋಮವಾರಪೇಟೆ: ಬಸವ ಜಯಂತಿ ದಿನದಂದು ಕಕ್ಕೆಹೊಳೆ ಸಮೀಪವಿರುವ ಬಸವಣ್ಣ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ವ್ಯವಸ್ಥೆ ಕಲ್ಪಿಸಬೇಕೆಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ತಹಸೀಲ್ದಾರ್ ನವೀನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಕಳೆದ 24 ವರ್ಷಗಳ ಹಿಂದೆ ಕಕ್ಕೆಹೊಳೆ ಸೇತುವೆ ಬಳಿ ಅಶ್ವರೂಢ ಬಸವೇಶ್ವರ ಪ್ರತಿಮೆಯನ್ನು ನಿರ್ಮಿಸಲಾಗಿತ್ತು. ಕಳೆದ 4 ತಿಂಗಳ ಹಿಂದೆ ಸೇತುವೆ ಕಾಮಗಾರಿಗಾಗಿ ಪ್ರತಿಮೆಯನ್ನು ಮುಚ್ಚಿಡಲಾಗಿದೆ. ಮೇ.10 ರ ಒಳಗೆ ಪ್ರತಿಮೆಯನ್ನು ಶುಚಿಗೊಳಿಸಬೇಕು ಹಾಗೂ ತಾಲೂಕು ಆಡಳಿತದ ವತಿಯಿಂದ ಜಯಂತಿಯಂದು ಮಾಲಾರ್ಪಣೆಗೆ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಬಸವ ಜಯಂತಿ ದಿನದಂದು ಪ್ರತಿಮೆಯನ್ನು ಶುಚಿಸಿಗೊಳಿಸಿ, ಮಾಲಾರ್ಪಣೆಗೆ ವ್ಯವಸ್ಥೆ ಮಾಡುವುದಾಗಿ ತಹಸೀಲ್ದಾರ್ ಭರವಸೆ ನೀಡಿದರು.