

ಬ್ರಹ್ಮಾವರ: ಹಲಸು ಸೇರಿದಂತೆ ನಾನಾ ನಮೂನೆಯ ಹಣ್ಣುಗಳನ್ನು ಬೆಳೆಗಾರರಿಂದ ನೇರ ಖರೀದಿ ಮಾಡುವ ಅವಕಾಶ ಬ್ರಹ್ಮಾವರ ರೋಟರಿ ಕ್ಲಬ್, ಕೃಷಿ ವಿಜ್ಞಾನ ಕೇಂದ್ರ ಮತ್ತು ನಾನಾ ಸಂಘ ಸಂಸ್ಥೆ ಸಹಕಾರದಲ್ಲಿ ಮೇ 31ರಿಂದ ಜೂನ್ 2ರ ತನಕ ಎಸ್‌ಎಂಎಸ್ ಸಮುದಾಯ ಭವನದಲ್ಲಿ ಜರುಗಲಿದೆ. 100ಕ್ಕೂ ಅಧಿಕ ಸ್ಟಾಲ್‌ನಲ್ಲಿ ರಾಜ್ಯದ ನಾನಾ ಭಾಗದಿಂದ ನಮ್ಮ ಇಲಾಖೆಯಲ್ಲಿ ಸಿಗದ ಅನೇಕ ಸಸ್ಯಗಳು ಹಣ್ಣುಗಳು ಮೇಳದಲ್ಲಿ ಸಿಗಲಿದೆ.
ಹಲಸು, ಮಾವು ಇತರ ಹಣ್ಣುಗಳು ಮತ್ತು ಅದರ ಖಾದ್ಯಗಳು, ಉಭಯ ಜಿಲ್ಲೆಯ 7 ನರ್ಸರಿ, ಹೂವಿನ ಗಿಡಗಳು, ಗೃಹೋಪಯೋಗಿ ಆಹಾರ ಪದಾರ್ಥಗಳು, ಹಣ್ಣಿನ ಕಲಾಕೃತಿಗಳು ರೈತರಿಗೆ ಮಾಹಿತಿ ಕೇಂದ್ರ ಹಲಸಿನ ಹಣ್ಣಿನ ತಿಂಡಿಗಳ ಮಾಹಿತಿ ಮತ್ತು ತರಬೇತಿ ಕಾರ್ಯಾಗಾರ 3 ದಿನ ನಡೆಯಲಿದ್ದು, ಶುಕ್ರವಾರ ಮೇಳ ಉದ್ಘಾಟನೆಗೊಳ್ಳಲಿದೆ. ಕೃಷಿ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಕೃಷಿ ವಿಜ್ಞಾನಿ ಡಾ.ಧನಂಜಯ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬ್ರಹ್ಮಾವರ ರೋಟರಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಆಲ್ವಿನ್ ಅಂದ್ರಾದೆ ರೋಟರಿಯ ಆರೂರು ಶ್ರೀಧರ ಶೆಟ್ಟಿ, ಸಂಕಯ್ಯ ಶೆಟ್ಟಿ, ಗಣೇಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.